ಅಮೆರಿಕದ ಸೇನಾ ಹೆಲಿಕಾಪ್ಟರ್ ಪತನ: ಐವರು ಯೋಧರ ಸಾವು

ಅಮೆರಿಕದ ಸೇನಾ ಹೆಲಿಕಾಪ್ಟರ್​ ಪತನಗೊಂಡಿದ್ದು, ಘಟನೆಯಲ್ಲಿ ಐವರು ಯೋಧರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಮೆಡಿಟರೇನಿಯನ್ ಸಮುದ್ರ ತೀರದಲ್ಲಿ ಈ ಘಟನೆ ಸಂಭವಿಸಿದೆ, ಸೈಪ್ರಸ್ ಕರಾವಳಿಯಲ್ಲಿ ಸೇನಾ ಹೆಲಿಕಾಪ್ಟರ್ ಪತನಗೊಂಡಿದ್ದು, ಹೆಲಿಕಾಪ್ಟರ್​ನಲ್ಲಿದ್ದ ಐವರು ಯೋಧರು ಮೃತಪಟ್ಟಿದ್ದಾರೆ ಎನ್ನಲಾಗ್ತಿದೆ.

ಅಪಘಾತ ಸಂಭವಿಸಿದ ಮಾಹಿತಿ ತಿಳಿಯುತ್ತಿದ್ದಂತೆ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ. ಮತ್ತು ಅದರ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ. ಹೆಲಿಕಾಪ್ಟರ್​ನಲ್ಲಿದ್ದವರು ಅಮೆರಿಕ ಮಿಲಿಟರಿಯ ವಿಶೇಷ ಕಾರ್ಯಾಚರಣೆಯ ಸಿಬ್ಬಂದಿಯಾಗಿದ್ದರು. ಸೇನಾ ತರಬೇತಿಯ ಭಾಗವಾಗಿ ವಾಯು ಇಂಧನ ತುಂಬುವ ಕಾರ್ಯಾಚರಣೆಯಲ್ಲಿದ್ದರು.

ಇನ್ನು ಸೇನಾ ಸದಸ್ಯರ ಕುಟುಂಬಗಳಿಗೆ ಗೌರವ ಮತ್ತು ರಕ್ಷಣಾ ಇಲಾಖೆಯ ನೀತಿಗೆ ಅನುಗುಣವಾಗಿ ಮೃತರ ಕುಟುಂಬಗಳಿಗೆ ತಿಳಿಸುವವರೆಗೆ ಮೃತ ಸಿಬ್ಬಂದಿಯ ಗುರುತನ್ನು 24 ಗಂಟೆಗಳಲ್ಲಿ ಬಹಿರಂಗಗೊಳಿಸುವುದಿಲ್ಲ ಎಂದು ಯುರೋಪಿಯನ್ ಕಮಾಂಡ್ ಹೇಳಿದೆ.

Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement