ಕ್ರಿಸ್‌ಮಸ್ ಕೇಕ್‌ನಲ್ಲಿ ಅರಳಿದ ರಾಮಮಂದಿರ – ಕಲಾವಿದೆಯ ಕೈಚಳಕಕ್ಕೆ ಮನಸೋತ ನೆಟ್ಟಿಗರು

ಪಶ್ಚಿಮ ಬಂಗಾಳ : ಅಯೋಧ್ಯ ರಾಮ ಮಂದಿರ ಉದ್ಘಾಟನೆಗೆ ಇಡೀ ದೇಶವೇ ಎದುರು ನೋಡುತ್ತಿದೆ. ರಾಮನ ಭವ್ಯ ಮಂದಿರ ನಿರ್ಮಾಣವಾಗಿರುವುದಕ್ಕೆ ಸಮಸ್ತ ಹಿಂದೂ ಸಮುದಾಯ ಸಂಭ್ರಮಿಸುತ್ತಿದೆ. ಇದೀಗ ಪಶ್ಚಿಮ ಬಂಗಾಳದ ಕಲಾವಿದೆಯೋರ್ವಳು ಕ್ರಿಸ್‌ಮಸ್‌ ಕೇಕ್‌ನಲ್ಲಿ ರಾಮನ ಮಂದಿರ ತಯಾರಿಸಿದ್ದಾಳೆ. ಸಿಲಿಗುರಿಯ ಕಲಾವಿದೆ ಪ್ರಿಯಾಂಕಾ ರಾಮಮಂದಿರದ ಥೀಮ್‌ನಲ್ಲಿ ಕ್ರಿಸ್‌ಮಸ್ ಕೇಕ್ ತಯಾರಿಸಿ ಮೆಚ್ಚುಗೆ ಕಾರಣವಾಗಿದ್ದಾಳೆ. ರಾಮ ಮಂದಿರದ ಉದ್ಘಾಟನೆ ಜನವರಿ 22 ರಂದು ನಡೆಯಲಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ನಾನು ಯಾವಾಗಲೂ ಅದಕ್ಕೆ ಸಂಬಂಧಿಸಿದ ಏನನ್ನಾದರೂ ಮಾಡಲು ಬಯಸುತ್ತೇನೆ. ನಾನು ಕೇಕ್ ಆರ್ಟಿಸ್ಟ್ ಆಗಿರುವುದರಿಂದ ರಾಮಮಂದಿರ ಥೀಮ್‌ನ ಕೇಕ್ ತಯಾರಿಸಿದ್ದೇನೆ ಎಂದಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement