ಅಮೆರಿಕದಲ್ಲಿ ಭಾರತೀಯ ಕುಟುಂಬದ ನಾಲ್ವರ ಸಾವಿಗೆ ಟ್ವಿಸ್ಟ್‌.!

ನ್ಯೂಯಾರ್ಕ್‌: ಕೇರಳ ಮೂಲದ ಕುಟುಂಬವೊಂದು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಮೃತರನ್ನು ಆನಂದ್ ಸುಜಿತ್ ಹೆನ್ರಿ (42), ಪತ್ನಿ ಅಲೈಸ್ ಪ್ರಿಯಾಂಕಾ(40), ಮತ್ತು ಅವರ 4 ವರ್ಷದ ಅವಳಿ ಮಕ್ಕಳಾದ ನೋಹ್ ಮತ್ತು ನೀಥಾನ್ ಎಂದು ಗುರುತಿಸಲಾಗಿದೆ. ಅಲೈಸ್​ ಪ್ರಿಯಾಂಕಾ ದೇಹದಲ್ಲಿ ಗುಂಡಿನ ಗಾಯಗಳಿವೆ. ಆದರೆ ಮಕ್ಕಳಲ್ಲಿ ಯಾವುದೇ ಗಾಯದ ಗುರುತುಗಳಿಲ್ಲ. ಮನೆಯ ಬಾತ್​ರೂಮ್​ನಲ್ಲಿ 9 ಎಂಎಂ ಪಿಸ್ತೂಲ್​ ಪತ್ತೆಯಾಗಿದ್ದು, ಪತ್ನಿಯನ್ನು ಕೊಲೆ ಮಾಡಿ, ತಾನು ಗುಂಡು ಹಾರಿಸಿಕೊಂಡು ಆನಂದ್​ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಆನಂದ್ ಹೆನ್ರಿ ಅವರು AI ಕಂಪನಿಯನ್ನು ಸಹ-ಸ್ಥಾಪಿಸುವ ಮೊದಲು 2022ರಿಂದ 2023 ರವರೆಗೆ ಮೆಟಾಗೆ ಸಾಫ್ಟ್‌ವೇರ್ ಎಂಜಿನಿಯರಿಂಗ್ ವ್ಯವಸ್ಥಾಪಕರಾಗಿ ಕೆಲಸ ಮಾಡಿದ್ದರು. ಅವರು ಈ ಹಿಂದೆ ಸುಮಾರು ಎಂಟು ವರ್ಷಗಳ ಕಾಲ ಗೂಗಲ್‌ನಲ್ಲಿ ಕೆಲಸ ಮಾಡಿದ್ದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement