ನ್ಯಾಯಾಲಯಗಳಿಗೆ ಕಾಪಿಯರ್ ಯಂತ್ರಗಳ ಹೊರಗುತ್ತಿಗೆ : ದರಪಟ್ಟಿ ಅರ್ಜಿ ಆಹ್ವಾನ

 

ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯಲ್ಲಿರುವ ವಿವಿಧ ನ್ಯಾಯಾಲಯಗಳಿಗೆ ಕಾಪಿಯರ್ ಯಂತ್ರಗಳನ್ನು ಹೊರಗುತ್ತಿಗೆ ಆಧಾರದಡಿ ಪಡೆಯುವ ಸಲುವಾಗಿ ದರಪಟ್ಟಿ ಆಹ್ವಾನಿಸಲಾಗಿದೆ.

ಚಿತ್ರದುರ್ಗದ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು, ಚಿತ್ರದುರ್ಗ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು, ಚಿತ್ರದುರ್ಗ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು, ಸೇರಿದಂತೆ ಹೊಳಲ್ಕೆರೆ, ಚಳ್ಳಕೆರೆ, ಹೊಸದುರ್ಗ, ಹಿರಿಯೂರು, ಮೊಳಕಾಲ್ಮೂರು ನ್ಯಾಯಾಲಯಗಳಿಗೆ ಹೀಗೆ ಒಟ್ಟು 08 ಕಾಪಿಯರ್ ಯಂತ್ರಗಳನ್ನು ಹೊರಗುತ್ತಿಗೆ ಆಧಾರದಡಿ ಪಡೆಯಲು ದರಪಟ್ಟಿ ಆಹ್ವಾನಿಸಿದ್ದು, ಆಸಕ್ತರು ಅನುಬಂಧ-ಎ ನಲ್ಲಿ ತಮ್ಮ ದರಪಟ್ಟಿಯನ್ನು ನಮೂದಿಸಿ, ಸೀಲ್ ಮಾಡಿದ ಲಕೋಟೆಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಚಿತ್ರದುರ್ಗ ಇವರಿಗೆ ಮಾರ್ಚ್ 26 ರಂದು ಮಧ್ಯಾಹ್ನ 02 ಗಂಟೆಯೊಳಗಾಗಿ ಸಲ್ಲಿಸಬೇಕು.  ಅದೇ ದಿನ ಸಂಜೆ 5.45 ಗಂಟೆಗೆ ಬಿಡ್‍ದಾರರ ಸಮಕ್ಷಮದಲ್ಲಿ ದರಪಟ್ಟಿ ಲಕೋಟೆ ತೆರೆಯಲಾಗುವುದು.  ಆಸಕ್ತರು ಟೆಂಡರ್ ಡಾಕ್ಯುಮೆಂಟ್ ಅನ್ನು https://chitradurga.dcourts.gov.in/ ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

Advertisement

=========

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement