ರಷ್ಯಾ-ಉಕ್ರೇನ್ ಯುದ್ಧದಲ್ಲಿ ಮತ್ತೋರ್ವ ಭಾರತೀಯ ಬಲಿ

ನವದೆಹಲಿ: ರಷ್ಯಾ-ಉಕ್ರೇನ್ ಯುದ್ಧದಲ್ಲಿ ಮತ್ತೋರ್ವ ಭಾರತೀಯ ಮೃತಪಟ್ಟಿದ್ದಾನೆ. ತೆಲಂಗಾಣ ಮೂಲದ ಮಹಮದ್ ಅಸ್ಫಾನ್(30) ಉಕ್ರೇನ್ ಡ್ರೋನ್ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ.

 

ಪ್ರವಾಸ, ಉದ್ಯೋಗ ಹೀಗೆ ಇನ್ನಿತರೆ ಕಾರಣಗಳಿಗಾಗಿ ರಷ್ಯಾ ದೇಶಕ್ಕೆ ತೆರಳಿರುವ ಭಾರತದ ಯುವಕರನ್ನು ಅಲ್ಲಿನ ಅಧಿಕಾರಿಗಳು ಬಲವಂತವಾಗಿ ಸೇನೆಗೆ ಸೇರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆ ಭಾರತೀಯ ಯುವಕರು ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಇದೇ ರೀತಿ ರಷ್ಯಾಗೆ ತೆರಳಿದ್ದ ಮಹಮದ್ ಅವರಿಗೆ ಉದ್ಯೋಗ ನೀಡುವುದಾಗಿ ಹೇಳಿ ರಷ್ಯಾ ಸೇನೆಯ ವ್ಯಾಗ್ನರ್ ಗ್ರೂಪ್ ಗೆ ಸೇರಿಸಿ ಮೋಸ ಮಾಡಲಾಗಿತ್ತು. ಇದೀಗ ಅವರು ಯುದ್ಧದಲ್ಲಿ ಮೃತಪಟ್ಟಿರುವುದಾಗಿ ರಷ್ಯಾದಲ್ಲಿರುವ ಭಾರತದ ರಾಯಭಾರಿ ಕಚೇರಿ ಮಾಹಿತಿ ನೀಡಿದೆ.

Advertisement

ಈ ಕುರಿತು ಮಾಹಿತಿ ನೀಡಿರುವ ರಾಯಭಾರಿ ಕಚೇರಿ, “ಭಾರತದ ಮೊಹಮ್ಮದ್‌ ಅಸ್ಫಾನ್‌ ಅವರು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ದೊರೆತಿದೆ. ರಷ್ಯಾ ಅಧಿಕಾರಿಗಳು ಹಾಗೂ ಮೊಹಮ್ಮದ್‌ ಅವರ ಕುಟುಂಬಸ್ಥರೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರ ಪಾರ್ಥಿವ ಶರೀರವನ್ನ ಭಾರತಕ್ಕೆ ಕಳುಹಿಸುವ ಪ್ರಯತ್ನ ಮಾಡುತ್ತಿದ್ದೇವೆ” ಎಂದು ತಿಳಿಸಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement