21 ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಅಂತಿಮ

ಬೆಂಗಳೂರು: 21 ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಶುಕ್ರವಾರ ಅಂತಿಮಗೊಳ್ಳಲಿದ್ದು ಸೋಮವಾರ ಬಿಡುಗಡೆಯಾಗುವುದು
ಬಹುತೇಕ ಖಚಿತ ಎನ್ನಲಾಗಿದೆ.
ಕಗ್ಗಂಟಾಗಿರುವ 6 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ರಾಜ್ಯ ಕಾಂಗ್ರೆಸ್ ನಾಯಕರು ಅಂತಿಮಗೊಳಿಸಿ ಕೇಂದ್ರೀಯ ಚುನಾವಣೆ ಸಮಿತಿಗೆ
ಕಳುಹಿಸಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯ ಕೇಂದ್ರೀಯ ಚುನಾವಣಾ ಸಮಿತಿ ಅನುಮೋದನೆ ನಂತರ ಪಟ್ಟಿ
ಅಧಿಕೃತವಾಗಿ ಬಿಡುಗಡೆಯಾಗಲಿದೆ. ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ರಾಜ್ಯದ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು ಇದೀಗ 21
ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ
ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ:
ಉಡುಪಿ -ಚಿಕ್ಕಮಗಳೂರು: ಜಯಪ್ರಕಾಶ್ ಹೆಗಡೆ
ದಕ್ಷಿಣ ಕನ್ನಡ:  ಪದ್ಮರಾಜ್
ಚಿತ್ರದುರ್ಗ: ಬಿ.ಎನ್. ಚಂದ್ರಪ್ಪ
ಚಿಕ್ಕಬಳ್ಳಾಪುರ: ರಕ್ಷಾ ರಾಮಯ್ಯ
ರಾಯಚೂರು: ಜಿ ಕುಮಾರ ನಾಯಕ
ದಾವಣಗೆರೆ: ಲತಾ ಮಲ್ಲಿಕಾರ್ಜುನ
ಉತ್ತರ ಕನ್ನಡ: ಅಂಜಲಿ ನಿಂಬಾಳ‌
ಬಾಗಲಕೋಟೆ: ಸಂಯುಕ್ತ ಪಾಟೀಲ್
ಹುಬ್ಬಳ್ಳಿ-ಧಾರವಾಡ: ವಿನೋದ್ ಅಸೂಟಿ
ಚಿಕ್ಕೋಡಿ: ಪ್ರಿಯಾಂಕಾ ಜಾರಕಿಹೊಳಿ
ಬೆಳಗಾವಿ: ಮೃಹಾಲ್ ಹೆಬಾಕ‌
ಬೆಂಗಳೂರು ದಕ್ಷಿಣ: ಸೌಮ್ಯ ರೆಡ್ಡಿ
ಬೆಂಗಳೂರು ಉತ್ತರ: ಪ್ರೊ. ರಾಜೀವ್ ಗೌಡ
ಬೆಂಗಳೂರು ಸೆಂಟ್ರಲ್: ಮನ್ಸೂರ್ ಅಲಿ ಖಾನ್
ಬಳ್ಳಾರಿ :ವೆಂಕಟೇಶ ಪ್ರಸಾದ್

ಚಾಮರಾಜ ನಗರ: ಸುನೀಲ್ ಬೋಸ್
ಮೈಸೂರು: ಎಂ ಲಕ್ಷ್ಮಣ್
ಕೋಲಾರ: ರಾಜಶೇಖರ ಹಿಟ್ನಾಳ್/ ಅಮರೇ ಗೌಡ ಬಯ್ಯಾಪುರ
ಬೀದರ್: ರಾಜಶೇಖರ ಪಾಟೀಲ/ ಬಿ.ಖಂಡ್ರೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement