ಬೆಂಗಳೂರು: ನಲಪಾಡ್ ಹುಡುಗರು ಅಂತ ವಿದ್ಯಾರ್ಥಿಯನ್ನು ಕಿಡ್ನಾಪ್ ಮಾಡಿ ಹಲ್ಲೆ ಮಾಡಿರೋ ಆರೋಪದ ಹಿನ್ನೆಲೆ ಒಂಬತ್ತು ಜನರ ವಿರುದ್ಧ ಕಿಡ್ನಾಪ್ ಹಾಗೂ ಸುಲಿಗೆ ಆರೋಪದಡಿ ಎಫ್‌ಐಆರ್ ದಾಖಲಾಗಿದೆ.
ಜೀವನ್ ಜೈನ್ ಎಂಬ ವಿದ್ಯಾರ್ಥಿಯಿಂದ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಖಾಸಗಿ ಕಾಲೇಜಿನಲ್ಲಿ ಬಿಬಿಎ ಓದುತ್ತಿರೋ ಜೀವನ್ ಜೈನ್ ಕಳೆದ ವರ್ಷ ಆಯುಷ್ ಶ್ರೀನಿವಾಸ್ ಎಂಬಾತನಿಂದ ಮೂರು ಲಕ್ಷ ಪಡೆದಿದ್ದ. ಇವೆಂಟ್ ಒಂದರ ವಿಚಾರವಾಗಿ ಜೀವನ್ ಜೈನ್ ಹಣ ಪಡೆದಿದ್ದ. ನಂತರ ಕಾರಣಾಂತರದಿಂದ ಹಣ ಕೊಡಲು ಆಗಿರಲಿಲ್ಲ. ಹಣ ಕೊಡದೆ ಇದ್ದ ಕಾರಣಕ್ಕೆ ಕಿಡ್ನಾಪ್ ಮಾಡಿ ಚರ್ಚ್ ಶ್ಟ್ರೀಟ್ ಬ್ರಿಗೆಡ್ ರಾಯಲ್ ಹೋಟೆಲ್‌ನಲ್ಲಿ ಕೂಡಿ ಹಾಕಿ ನಗ್ನವಾಗಿಸಿ ವಿಡಿಯೋ ತೆಗೆದು ವಿದ್ಯಾರ್ಥಿ ತಂದೆಗೆ ಮತ್ತೆ ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಅಲ್ಲದೇ ನಾವು ನಲಪಾಡ್ ಹುಡುಗರು ಹತ್ತು ಲಕ್ಷ ಕೊಡಬೇಕು ಅಂತ ಬೆದರಿಕೆ ಹಾಕಿ ಆರು ಲಕ್ಷ ಹಾಕಿಸಿಕೊಂಡಿದ್ದಲ್ಲದೆ ಹತ್ತು ಲಕ್ಷದವರೆಗೆ ಕೊಡಬೇಕು ಅಂತ ಬೆದರಿಕೆ ಹಾಕಿದ್ದಾಗಿ ಆರೋಪ ಕೇಳಿ ಬಂದಿದೆ. ಈ ಸಂಬಂಧ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದ್ರೆ ನಿಜವಾಗಲೂ ಆರೋಪಿಗಳು ನಲಪಾಡ್‌ಗೆ ಪರಿಚಯವಿದ್ರಾ? ಇಲ್ಲ ನಲಪಾಡ್ ಹೆಸರನ್ನು ಬಳಸಿಕೊಂಡು ಈ ಕೃತ್ತವೆಸಗಿದ್ದಾರೆ ಅನ್ನೋದನ್ನು ಪೊಲೀಸ್ರು ವಿಚಾರಣೆ ನಡೆಸುತ್ತಿದ್ದಾರೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.