ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಕೇಸ್ನಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ಗೆ ಲೋಕಾಯುಕ್ತ ಅಧಿಕಾರಿಗಳು ನೋಟೀಸ್ ನೀಡಿದ್ದಾರೆ.
ಖುದ್ದು ಸಚಿವ ಜಮೀರ್ ನಿವಾಸಕ್ಕೆ ತೆರಳಿ ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಇನ್ಸ್ಪೆಕ್ಟರ್ ನೋಟೀಸ್ ನೀಡಿದ್ದಾರೆ.
ಡಿಸೆಂಬರ್ 3ನೇ ತಾರೀಖಿಗೆ ಖುದ್ದು ಹಾಜರಾಗಿ ಪ್ರಕರಣದ ತನಿಖೆಗೆ ವಿವರಣೆ ನೀಡುವಂತೆ ನೋಟೀಸ್ ನೀಡಿದ್ದಾರೆ. ಈ ಹಿಂದೆ ಎಸಿಬಿ ಶಿವಾಜಿನಗರ ಬಂಬೂಬಜಾರ್ ನಲ್ಲಿರೋ ಮನೆ ಹಾಗೂ ಕಲಾಸಿಪಾಳ್ಯದ ಕಚೇರಿ ಮೇಲೆ ದಾಳಿ ನಡೆಸಿ ಕೇಸ್ ದಾಖಲಿಸಿತ್ತು.
ಆಗ ಪ್ರಾಥಮಿಕ ಹಂತದ ತನಿಖೆ ನಡೆಸಿ ಹೇಳಿಕೆ ದಾಖಲಿಸಿದ್ದರು. ಎಸಿಬಿ ರದ್ದಾದ ಹಿನ್ನೆಲೆ ಲೋಕಾಯುಕ್ತಕ್ಕೆ ಪ್ರಕರಣ ವರ್ಗಾವಣೆಯಾಗಿದ್ದು ಸದ್ಯ ತನಿಖೆ ಮುಂದುವರಿದ ಭಾಗವಾಗಿ ನೋಟೀಸ್ ನೀಡಿದ್ದಾರೆ.