ಕಲಬುರ್ಗಿ: ಸೇಡಂ ತಾ. ಕೋಡ್ಲಾ ಗ್ರಾಮದ ಉರಿಲಿಂಗ ಪೆದ್ದೀಶ್ವರ ಮಠದ ಡಾ. ನಂಜುಂಡ ಸ್ವಾಮೀಜಿ (84) ಲಿಂಗೈಕ್ಯರಾಗಿದ್ದಾರೆ.
ಇಂದು ಸಂಜೆ 4ಕ್ಕೆ ಮಠದ ಆವರಣದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ತಮ್ಮ ಜೀವಿತಾವಧಿಯುದ್ದಕ್ಕೂ ಬಸವಾದಿ ಶರಣರ ತತ್ವ ಸಿದ್ಧಾಂತ ಪಾಲನೆ ಮಾಡಿದ್ದ ಸ್ವಾಮೀಜಿ, ಸಹಸ್ರಾರು ಭಕ್ತರಿಗೆ ಲಿಂಗ ದೀಕ್ಷೆ ನೀಡಿದ್ದರು.
ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಕೊನೆಯುಸಿರೆಳೆದರು. ಸ್ವಾಮಿಗಳು ಖರ್ಗೆಯವರ ಬಾಲ್ಯ ಸ್ನೇಹಿತರಾಗಿದ್ದರು.