ಮಂಗಳೂರು: ಇರಾನ್- ಇರಾಕ್ ಯುದ್ಧದ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯ ದ ರಾಷ್ಟ್ರಗಳು ಸೋಮವಾರ ತನ್ನ ವಾಯು ಪ್ರದೇಶಗಳನ್ನು ಬಂದ್ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಮಂಗಳೂರಿನಿಂದ ದಮಾಮ್ಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ಮಸ್ಕತ್ಗೆ ದಾರಿ ಬದಲಿಸಿತ್ತು. ಮಂಗಳೂರಿನಿಂದ ಅಬುಧಾಬಿ ಗೆ ಹೊರಟಿದ್ದ ಇಂಡಿಗೋ ವಿಮಾನವು ಮುಂಬೈಯಲ್ಲಿ ಲ್ಯಾಂಡ್ ಆಗಿತ್ತು.
ಇದೀಗ ಈ ಎರಡೂ ವಿಮನಗಳು ಮಂಗಳವಾರ ಬೆಳಗ್ಗೆ ಮಂಗಳೂರಿಗೆ ವಾಪಸ್ ಬಂದಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.