ಹೂವಿನ ಹಡಗಲಿ: ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹರಪನಹಳ್ಳಿಯ ದೊಡ್ಡ ಮೈಲಾರದ ಮೈಲಾರಲಿಂಗೇಶ್ವರ ದೇವಾಲಯದಲ್ಲಿ ಭರತ ಹುಣ್ಣಿಮೆಯ ಈ ವರ್ಷದ ಕಾರಣಿಕ ನುಡಿಯಲಾಗಿದೆ.
ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿಯಾಯ್ತಲೇ ಪರಾಕ್ ಎಂದು ಗೊರವಪ್ಪ ಕಾರಣಿಕ ನುಡಿದಿದ್ದಾರೆ. ಭಕ್ತರ ಜಯಘೋಷದ ನಡುವೆ ಬಿಲ್ಲನ್ನೇರಿದ ಗೊರವಯ್ಯ ದಿಟ್ಟಿಸಿ ನೋಡುತ್ತಾ ಈ ವರ್ಷದ ಕಾರಣಿಕ ನುಡಿದರು. ಭರತ ಹುಣ್ಣಿಮೆಯ ದಿನ ನುಡಿಯುವ ಈ ಕಾರಣಿಕವನ್ನು ಅನೇಕ ರೀತಿಯಲ್ಲಿ ವಿಶ್ಲೇಷಿಸಲಾಗುತ್ತದೆ. ವರ್ಷದ ಭವಿಷ್ಯವಾಣಿ ಎನ್ನಲಾಗುತ್ತದೆ.
ಈ ಬಾರಿ ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿಯಾಯ್ತಲೇ ಪರಾಕ್ ಎಂದು ಕಾರಣಿಕ ನುಡಿಯಲಾಗಿದ್ದು, ಈ ಬಾರಿ ಮಳೆ ಬೆಳೆಯಾಗಿ ರಾಜ್ಯದ ಜನ ಸಮೃದ್ಧಿಯಿಂದ ಇರುತ್ತಾರೆ ಎಂದು ಹೇಳಲಾಗಿದೆ.

































