ಬೆಂಗಳೂರು: ಈ ವರ್ಷದ 2026ರ ಕಳೆದಿರುವ ಐದೇ ತಿಂಗಳಲ್ಲೇ ಜಾಗತಿಕವಾಗಿ 144 ಟೆಕ್ ಕಂಪನಿಗಳಲ್ಲಿ ಒಟ್ಟು 110,223 ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ.
ಬುಧವಾರ, ಮೆಟಾ 8,000 ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಇನ್ನು, ಅಮೆಜಾನ್ ಈ ವರ್ಷ ಸುಮಾರು 16,000 ಉದ್ಯೋಗಗಳನ್ನು ಕಡಿತಗೊಳಿಸುವ ಯೋಜನೆಯನ್ನು ಈಗಾಗಲೇ ಪ್ರಕಟಿಸಿದೆ.































