ಬೆಂಗಳೂರು: NEET ಪೇಪರ್ ಲೀಕ್ ಖಂಡಿಸಿ ಕೇಂದ್ರದ ವಿರುದ್ಧ ರಾಜ್ಯ ಯುವ ಕಾಂಗ್ರೆಸ್ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತ್ತಿದೆ. ಈ ಬಗ್ಗೆ ಮಾತಾನಾಡಿದ CM ಸಿದ್ದರಾಮಯ್ಯ, NEET ಪ್ರಶ್ನೆಪತ್ರಿಕೆ ಸೋರಿಕೆಯಾಗಲು ಬಿಡುವ ಮೂಲಕ, ಕೇಂದ್ರ ಸರ್ಕಾರ 22 ಲಕ್ಷ ವಿದ್ಯಾರ್ಥಿಗಳ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದರು.
ಭ್ರಷ್ಟ, ನಿರ್ಲಜ್ಜ BJP ಸರ್ಕಾರದ ವಿರುದ್ಧ ದೇಶದ ಜನರು ಸ್ವಾತಂತ್ರ್ಯ ಸಂಗ್ರಾಮದ ಮಾದರಿಯಲ್ಲಿ ಮತ್ತೊಂದು ಸುತ್ತಿನ ಚಳವಳಿ ಆರಂಭಿಸುವ ದಿನಗಳು ದೂರವಿಲ್ಲ ಎಂದಿದ್ದಾರೆ.































