ಚಿತ್ರದುರ್ಗ: ದೇಶಕ್ಕೆ ಸ್ವಾತಂತ್ರ್ಯ ತರಲು ತ್ಯಾಗ ಬಲಿದಾನಗಳ ಮೂಲಕ, ಲಾಟಿ ಬೂಟಿನೇಟು ತಿಂದು ಜೈಲುವಾಸ, ಅಜ್ಞಾತವಾಸ, ವನವಾಸ ಅನುಭವಿ ಹೋರಾಟ ನಡೆಸಿ ಸ್ವಾತಂತ್ರ್ಯ ತಂದುಕೊಟ್ಟ ಸ್ವಾತಂತ್ರ್ಯ ಹೋರಾಟಗಾ ರರಿಗೆ ಗೌರವಧನವನ್ನು ಇಪ್ಪತ್ತು ಸಾವಿರ ರೂಪಾಯಿಗಳಿಗೆ ಏರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸ್ವಾತಂತ್ರ್ಯ ಹೋರಾಟಗಾರರರ ಹಿತರಕ್ಷಣಾ ವೇದಿಕೆ, ಚಿತ್ರದುರ್ಗ ಮತ್ತು ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಉತ್ತರಾಧಿಕಾರಿಗಳ ಸಂಘದವತಿಯಿಂದ ಶುಕ್ರವಾರ ಪ್ರತಿಭಟನೆಯನ್ನು ನಡೆಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ನಗರದ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿಗಳ, ಕಚೇರಿಯವರೆಗೂ ಪಾದಯತ್ರೆಯನ್ನು ನಡೆಸಿ ಜಿಲ್ಲಾಡಳಿತಕ್ಕೆಮ ಮನವಿ ಸಲ್ಲಿಸಿದ ಅವರು, ಸ್ವಾತಂತ್ರ್ಯ ಹೋರಾಟಗಾರರು, ದೇಶಕ್ಕೆ ಸ್ವಾತಂತ್ರ್ಯ ತರಲು ತ್ಯಾಗ ಬಲಿದಾನಗಳ ಮೂಲಕ, ಲಾಟಿ ಬೂಟಿನೇಟು ತಿಂದು ಜೈಲುವಾಸ, ಅಜ್ಞಾತವಾಸ, ವನವಾಸ ಅನುಭವಿ ಹೋರಾಟ ನಡೆಸಿ ಸ್ವಾತಂತ್ರ್ಯ ತಂದುಕೊಟ್ಟ ಸ್ವಾತಂತ್ರ್ಯ ಹೋರಾಟಗಾರರಿಗೆ ಸುಮಾರು 95 ವರ್ಷಕ್ಕೂ ಮೇಲ್ಪಟ್ಟು ವಯಸ್ಸಾಗಿದೆ. ಅವರ ಪತ್ನಿಯರಿಗೆ ಸುಮಾರು 85 ವರ್ಷ ವಯಸ್ಸಾಗಿದೆ. ವಯೋಗುಣಕ್ಕೆ ತಕ್ಕಂತೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇವರಿಗೆ ರಾಜ್ಯ ಸರ್ಕಾರದಿಂದ ಹತ್ತು ಸಾವಿರ ರೂಪಾಯಿಗಳ ಗೌರವಧನ ಸಿಗುತ್ತಿದೆ ರಾಜ್ಯದಲ್ಲಿ ಅಂದಾಜು 2400 ಹೋರಾಟಗಾರರಿದ್ದು ಇನ್ನೂ ಮೂಲ್ಕು ವರ್ಷಗಳಲ್ಲಿ ಅವರುಗಳೂ ಇಲ್ಲದಂತಾಗುತ್ತಾರೆ. ಅವರಿಗೆ ನೀಡು ತ್ತಿರುವ ಹತ್ತು ಸಾವಿರ ರೂಪಾಯಿಗಳ ಗೌರವಧನ, ಔಷಧಿ, ಮಾತ್ರೆ, ಚಿಕಿತ್ಸೆ, ಆಹಾರ ಇವುಗಳಿಗೆ ಸಾಕಾ ಗುತ್ತಿಲ್ಲ ಇದ್ದಲ್ಲದೆವ ಜೀವನ ನಿರ್ವಹಣೆಗೆ ತೊಂದರೆಯಾಗಿದೆ ಎಂದು ತಿಳಿಸಿದರು.
21-01-2025ಕ್ಕೆ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ (ಸ್ವಾತಂತ್ರ್ಯ ಹೋರಾಟಗಾರರ) ಅಧಿವೇಶನಕ್ಕೆ 100 ವರ್ಷ ತುಂಬಿದ್ದು ಈಗ 101 ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಸಂತೋಷಕ್ಕೆ ಗೌರವಧನವನ್ನು ಇಪ್ಪತ್ತು ಸಾವಿರ ರೂಪಾಯಿಗಳಿಗೆ ಹೆಚ್ಚಳ ಮಾಡುವಂತೆ ಮನವಿ ಮಾಡಿದ್ದು, ಡಿಸೆಂಬರ್ ತಿಂಗಳ ಗೌರವಧನ ಈವರೆಗೆ ಬಿಡುಗಡೆ ಮಾಡಿಲ್ಲ. ಅದನ್ನೂ ಕೂಡಲೇ ಬಿಡುಗಡೆ ಮಾಡಲು ಹಾಗೂ ಕೆಲವರಿಗೆ 2, 10, 15, 20 ತಿಂಗಳುಗಳ ಗೌರವಧನ ನೀಡಲಾಗಿಲ್ಲ. ಅದನ್ನು ಬಿಡುಗಡೆ ಮಾಡಲು ಹಲವಾರು ಬಾರಿ ಮನವಿಗಳನ್ನು ಸಲ್ಲಿಸಿರುತ್ತೇವೆ. ಆದರೂ ಬಿಡುಗಡೆಯಾಗಿಲ್ಲ ಬಿಡುಗಡೆ ಮಾಡಲು ಕರ್ನಾಟಕ ರಾಜ್ಯ ಸ್ವಾತಂತ್ರ್ಯ ಹೋರಾಟಗಾರರರ ಹಿತರಕ್ಷಣಾ ವೇದಿಕೆ, ಚಿತ್ರದುರ್ಗ ಮತ್ತು ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಉತ್ತರಾಧಿಕಾರಿಗಳ ಸಂಘ ವಿನಂತಿಸಿದೆ. ಈ ಸಂದರ್ಭದಲ್ಲಿ ನರಸಿಂಹಮೂರ್ತಿ ಸೇರಿದಂತೆ ಇತರರು ಭಾಗವಹಿಸಿದ್ದರು.

































