ಚಿತ್ರದುರ್ಗ :ಚಿತ್ರದುರ್ಗ ನಗರ ಉಪ ವಿಭಾಗ ಕಾರ್ಯ ಮತ್ತು ಪಾಲನಾ ಘಟಕ-4 ರ ವ್ಯಾಪ್ತಿಯಲ್ಲಿ ವಿದ್ಯುತ್ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಇದೇ ಮಾರ್ಚ್ 8ರಂದು ನಗರದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಚಿತ್ರದುರ್ಗ ನಗರ ಉಪ ವಿಭಾಗದ ಘಟಕ-4ರ ಪ್ರದೇಶದ ಪಿ.ಕೆ.ಹಳ್ಳಿ ವ್ಯಾಪ್ತಿಯ ಚಿನ್ಮೂಲಾದ್ರಿ ಶಾಲೆ ಹತ್ತಿರ, ಕನಕ ನಗರ, ಗ್ರಾಮೀಣ ಪೊಲೀಸ್ ಠಾಣೆ ಮತ್ತು ವಸತಿಗೃಹಗಳು, ಬಸವೇಶ್ವರ ನಗರ, ಬಾಪೂಜಿ ನಗರ, ಏಳುಕೋಟಿ ಲೇಔಟ್, ಈರುಳ್ಳಿ ಬಡಾವಣೆ, ಮೇದೇಹಳ್ಳಿ, ಕೋಡಯ್ಯನಹಟ್ಟಿ, ತಮಟಕಲ್ಲು ಗ್ರಾಮಗಳಿಗೆ ಹೊಂದಿಕೊಂಡಂತಹ ಪ್ರದೇಶಗಳಲ್ಲಿ ಅಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹೆಚ್.ತಿಮ್ಮಣ್ಣ ಕೋರಿದ್ದಾರೆ.































