ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಬೀಜವಿಲ್ಲದೆ ಬಿತ್ತು ಹುಟ್ಟುವ ತೆರನಾವುದು ?
ತೊಟ್ಟಿಲ್ಲದೆ ಹಣ್ಣು ಇಪ್ಪ ತೆರನಾವುದು ?
ಇಷ್ಟವಿಲ್ಲದೆ ಚಿತ್ತ ಅಪ್ಪುವ ಠಾವಾವುದು ?
ಇಂತೀ ಭೇದದಲ್ಲಿ ಭೇದಕನಾಗಿ
ಎರಡಳಿದು ವೇಧಿಸಿ ನಿಂದಲ್ಲಿಯೆಏಣಾಂಕಧರ ಸೋಮೇಶ್ವರಲಿಂಗದಲ್ಲಿ ಪ್ರಾಣಲಿಂಗಿಯ ಸ್ಥಲ.
-ಬಿಬ್ಬಿ ಬಾಚಯ್ಯ































