ಪಂಜಾಬ್: ಡಾ. ಸಲೋನಿ ಸಿದಾನಾ ಅವರು ವೈದ್ಯ ವೃತ್ತಿಯನ್ನೇ ತೊರೆದು ಐಎಎಸ್ ಅಧಿಕಾರಿಯಾದ ಅವರ ಕಥೆಯೇ ಯುಪಿಎಸ್ ಸಿ ಅಭ್ಯರ್ಥಿಗಳಿಗೆ ದಾರಿದೀಪವಾಗಲಿದೆ.
ಪಂಜಾಬ್ನ ಜಲಾಲಾಬಾದ್ ಮೂಲದ ಡಾ. ಸಲೋನಿ ಸಿದಾನಾ ಎಂಬವರು ತನ್ನ ವೈದ್ಯ ವೃತ್ತಿಯನ್ನೇ ತೊರೆದು ಐಎಎಸ್ ಅಧಿಕಾರಿಯಾಗಿದ್ದಾರೆ. ತನ್ನ ತಂದೆಯ ಆಸೆ, ಗುರಿಯನ್ನು ನೆರವೇರಿಸುವ ದೃಷ್ಟಿಯಿಂದ ಸಲೋನಿ ಸಿದಾನಾ ಯುಪಿಎಸ್ಸಿ ಪರೀಕ್ಷೆ ಬರೆದು ಮೊದಲ ಪ್ರಯತ್ನದಲ್ಲೇ ಸಕ್ಸಸ್ ಕಂಡರು.
2012 ರಲ್ಲಿ ದೆಹಲಿಯ ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಮಾಡಿ ಸಲೋನಿ ಸಿದಾನಾ ವೈದ್ಯ ವೃತ್ತಿಯನ್ನು ಪಡೆದರು. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವ ಕನಸು ಕಂಡಿದ್ದ ಸಲೋನಿ, ತಂದೆಯ ಸಲಹೆಯಂತೆ ಯುಪಿಎಸ್ಸಿ ಪರೀಕ್ಷೆಗಾಗಿ ಭಾರತದಲ್ಲೇ ಉಳಿಯಲು ನಿರ್ಧರಿಸಿದರು. ಇನ್ನು ಯಾವುದೇ ತರಬೇತಿ ಪಡೆಯದೆಯೇ ಯುಪಿಎಸ್ಸಿಯಲ್ಲಿ 74ನೇ ರ್ಯಾಂಕ್ ಪಡೆಯುವ ಮೂಲಕ ಮೊದಲ ಪ್ರಯತ್ನದಲ್ಲೇ ಪಾಸ್ ಮಾಡಿದರು.
ಬಾಲ್ಯದಲ್ಲೇ ವೈದ್ಯೆಯಾಗುವ ಕನಸು ಮತ್ತು ತನ್ನ ಸಮುದಾಯಕ್ಕೆ ಸೇವೆ ಸಲ್ಲಿಸುವ ಆಸೆಯನ್ನು ಹೊಂದಿದ್ದರಂತೆ. ಇದಕ್ಕಾಗಿ NEET ಪರೀಕ್ಷೆಯನ್ನು ಯಶಸ್ವಿಯಾಗಿ ಪಾಸ್ ಮಾಡಿದರು. ನಂತರ ಅವರು ದೆಹಲಿಯ ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜಿನಲ್ಲಿ ತಮ್ಮ MBBS ಶಿಕ್ಷಣ ಪಡೆದು, ವೈದ್ಯ ವೃತ್ತಿಯನ್ನು ಗಿಟ್ಟಿಸಿಕೊಂಡರು. 2016ರಲ್ಲಿ ಸಲೋನಿ ಮತ್ತು , ಐಎಎಸ್ ಅಧಿಕಾರಿ ಆಶಿಶ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.































