ಚಿತ್ರದುರ್ಗ : ಆಧುನಿಕ ಯುಗದಲ್ಲಿ ಜಾನಪದ ಕಲೆಗಳು ಅಳವಿನಂಚಿನಲ್ಲಿವೆ ಎಂದು ಗ್ರಾಮೀಣ ಕಲಾವಿದ ಮಲ್ಲಿಕಾರ್ಜುನ್ ವಿಷಾದ ವ್ಯಕ್ತಪಡಿಸಿದರು.
ಕಾರಂಜಿ ಕಲ್ಚರಲ್ ಟ್ರಸ್ಟ್ ಮದಕರಿಪುರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ಮಾಳೇನಹಳ್ಳಿಯಲ್ಲಿ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಗ್ರಾಮೀಣ ಜಾನಪದ ಗಾಯನ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.
ಮೊಬೈಲ್ ಹಾಗೂ ಟಿವಿ. ಹಾವಳಿಯಿಂದ ಗ್ರಾಮೀಣ ಜಾನಪದ ಕಲೆಗಳು ನಶಿಸುತ್ತಿರುವುದರಿಂದ ಜಾನಪದ ಕಲೆಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ಮುಂದಿನ ಪೀಳಿಗೆಗೆ ಸಂರಕ್ಷಿಸಬೇಕಿದೆ ಎಂದು ಸಲಹೆ ನೀಡಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಎಸ್.ಚನ್ನಬಸಪ್ಪ, ಮಾಳೇನಹಳ್ಳಿ ಗ್ರಾಮದ ಮುಖಂಡರುಗಳಾದ ಜಗದೀಶ್, ಸುರೇಶ್, ಚಂದ್ರಪ್ಪ, ರಂಗ ಕಲಾವಿದ ಟಿ.ಮಧು
ಕಾರಂಜಿ ಕಲ್ಚರಲ್ ಟ್ರಸ್ಟ್ನ ಕಾರ್ಯದರ್ಶಿ ಶ್ರೀನಿವಾಸಮೂರ್ತಿ ಇವರುಗಳು ವೇದಿಕೆಯಲ್ಲಿದ್ದರು.































