ಚಿತ್ರದುರ್ಗ: ಡೆಹರಾಡೂನ್, ರಾಷ್ಟ್ರೀಯ ಮಿಲಟರಿ ಕಾಲೇಜಿನಲ್ಲಿ ಜನವರಿ 2027ನೇ ಅಧಿವೇಶನಕ್ಕಾಗಿ 8ನೇ ತರಗತಿಗೆ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಕೆ ಅವಧಿಯನ್ನು ಏ.5 ರಿಂದ ಏ.15 ವರೆಗೆ ವಿಸ್ತರಣೆ ಮಾಡಲಾಗಿದೆ.
11 ವರ್ಷ 6 ತಿಂಗಳು ತುಂಬಿರುವ ಹಾಗೂ 13 ವರ್ಷದೊಳಗಿನ ದಿನಾಂಕ 02-01-2014 ರಿಂದ 01-07-2015 ರೊಳಗೆ ಜನಿಸಿರುವ ಬಾಲಕ ಮತ್ತು ಬಾಲಕಿಯರು ಅರ್ಜಿ ಸಲ್ಲಿಸಬಹುದು. ಅರ್ಹತಾ ಪ್ರವೇಶ ಪರೀಕ್ಷೆಯು ಜೂ.7 ರಂದು ಬೆಂಗಳೂರು ಕೇಂದ್ರದಲ್ಲಿ ನಡೆಯಲಿದೆ.
ಪ್ರವೇಶ ಬಯಸುವವರು ಭರ್ತಿ ಮಾಡಿದ ಅರ್ಜಿಯನ್ನು ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬೆಂಗಳೂರು-560025 ಇವರಿಗೆ ಸಲ್ಲಿಸಬೇಕು. ಹಚ್ಚಿನ ಮಾಹಿತಿಗಾಗಿ ಬೆಂಗಳೂರು ನಿರ್ದೇಶನಾಲಯದ ದೂರವಾಣಿ ಸಂಖ್ಯೆ 080-25589459 ಹಾಗೂ ಜಾಲತಾಣ www.rimc.gov.in ಅನ್ನು ಸಂಪರ್ಕಿಸಬಹುದು ಎಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕ ಡಾ.ಸಿ.ವಿ.ಹಿರೇಮಠ ತಿಳಿಸಿದ್ದಾರೆ.































