ಚಿತ್ರದುರ್ಗ : ಕೆಳಗೋಟೆಯಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಬಾಳೆಹಣ್ಣಿನಿಂದ ಅಲಂಕರಿಸಿ ಪೂಜಿಸಲಾಯಿತು.
ಈ ಬಾರಿ ಪಚ್ಚಬಾಳೆಹಣ್ಣಿನ ಗೊನೆಯಿಂದ ಆಂಜನೇಯಸ್ವಾಮಿಯನ್ನು ವಿಶೇಷವಾಗಿ ಸಿಂಗರಿಸಲಾಗಿತ್ತು. ಬೆಳಗಿನಿಂದ ಸಂಜೆಯತನಕ ನೂರಾರು ಭಕ್ತರು ಧಾವಿಸಿ ಆಂಜನೇಯಸ್ವಾಮಿಗೆ ಶ್ರದ್ದಾ ಭಕ್ತಿಯನ್ನು ಸಮರ್ಪಿಸಿದರು.






























