ಬೆಂಗಳೂರು: ರಾಜ್ಯದ ಅನೇಕ ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಟಿದ್ದು, ನಗರದಲ್ಲಿನ ಬಿಸಿಲಿನ ತಾಪಮಾನ ಹಳ್ಳಿ ಭಾಗಗಳಿಗೆ ಹೋಲಿಸಿದರೆ, ಹಳ್ಳಿಗಳಲ್ಲಿ ಬಿಸಿಲಿನ ತಾಪಮಾನ 2 ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚಿದೆ ಎಂದು ಹವಾಮಾನ ಇಲಾಖೆ ತಜ್ಞ CS ಪಾಟೀಲ್ ಮಾಹಿತಿ ನೀಡಿದ್ದಾರೆ.
ತಾಪಮಾನದಿಂದ ರಾತ್ರಿ ಹಾಗೂ ಹಗಲಿನಲ್ಲಿ ಉಷ್ಣಾಂಶ ಜಾಸ್ತಿ ಇರುತ್ತೆ. ಬಿಸಿಲಿನ ತಾಪಮಾನಕ್ಕೆ ಕೆರೆ, ಬಾವಿ, ಡ್ಯಾಂ ನೀರು ಆವಿಯಾಗುತ್ತಿದ್ದು, ಅನೇಕ ಜಲಾಶಯ ಬತ್ತಿ ಹೋಗುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದ್ದಾರೆ.
































