ಚಿತ್ರದುರ್ಗ: ಪ್ರತಿ ವರ್ಷದಂತೆ ಈ ವರ್ಷವೂ ಸಹ 27 ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಉದ್ಘಾಟನೆಯ ವಾರ್ಷಿಕೋತ್ಸವ ಕಾರ್ಯಕ್ರಮವು ಚಿತ್ರದುರ್ಗದ ಮದೆಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಗಣ ಹೋಮ ಹಾಗೂ ಚಂಡಿಕಾ ಹೋಮ ನೆರವೇರಿತು.
ಹೋಮದ ಪೂರ್ಣಾವತಿಗೆ ಧವಸ ಧಾನ್ಯ ,ಸೀರೆ, ಕುಪಸ ಹಣ್ಣು ಹಾಗೂ ಇನ್ನಿತರೆ ಪೂಜಾ ಸಾಮಗ್ರಿಗಳನ್ನು ಹೋಮಕ್ಕೆ ಅರ್ಪಿಸಿದರು. ಬಂದಂತಹ ಭಕ್ತಾದಿಗಳಿಗೆ ಅನ್ನ ಪ್ರಸಾದದ ಕಾರ್ಯಕ್ರಮ ನೆರವೇರಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮಾಲೀಕರು ಹೀರೋ ಹೋಂಡಾ ಶೋ ರೂಂ ನೆರವೇರಿಸುವರು . ಶಾಮಿಯಾನ ಹಾಗೂ ವಿದ್ಯುತ್ ದೀಪಾಲಂಕರ ಸೇವಕರ್ತರು ಹನುಮಂತರೆಡ್ಡಿ ಮತ್ತು ಮಕ್ಕಳು ಉಪಸ್ಥಿತರಿದ್ದರು ಈ ಎಲ್ಲಾ ಪೂಜಾ ಕಾರ್ಯಕ್ರಮಕ್ಕೆ ಚಿತ್ರದುರ್ಗದ ಸಮಸ್ತ ಅಯ್ಯಪ್ಪ ಸ್ವಾಮಿ ಭಕ್ತಾದಿಗಳು ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಆಗಮಿಸಿ ದೇವರಾದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಅಯ್ಯಪ್ಪ ಸ್ವಾಮಿ ದೇವರಿಗೆ ಅಭಿಷೇಕ ಅಲಂಕಾರ ಪೂಜೆಯ ನೇತೃತ್ವವನ್ನು ದೇವಸ್ಥಾನದ ಹಿರಿಯ ಅರ್ಚಕರಾದ ಸತೀಶ್ ಶರ್ಮ ಸಂಗಡಿಗರಿಂದ ವಹಿಸಿದ್ದರು. ಈ ಸಂದರ್ಭದಲ್ಲಿ ಶರಣ್ ಕುಮಾರ್ ಅಧ್ಯಕ್ಷರು ಕರ್ನಾಟಕ ರಾಜ್ಯ ಅನ್ನದಾನ ಪ್ರಸಾದ ಸಮಿತಿ ಹಾಗೂ ಪಿ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಚಿತ್ರದುರ್ಗ ಹಾಗೂ ದೇವಸ್ಥಾನದ ಉಪಾಧ್ಯಕ್ಷರು ಮಲ್ಲಿಕಾರ್ಜುನ್, ಪದಾಧಿಕಾರಿಗಳಾದ V G ಮೋಹನ್ ಕುಮಾರ್, ಇಂದ್ರನ, ಸೂರಪ್ಪ ,ರೇಷ್ಮೆ ಮಂಜುನಾಥ್, ಸೂರಪ್ಪ, ಜಗದೀಶ್ ಉಪಸ್ಥಿತರಿದ್ದರು

































