ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಪೂಜೆ ಪುಣ್ಯದೊದಗೆಂದು ಮಾಡುತ್ತಿದ್ದಲ್ಲಿ, ಮತ್ತಿನ್ನಾರುವ ಕೇಳಲೇಕೆ ?
ಇಕ್ಕಿ, ಕೊಟ್ಟು ಮುಕ್ತಿಯ ಬಟ್ಟೆಯುಂಟೆಂದು ಇನ್ನೊಬ್ಬರ ದೃಷ್ಟವ ಕೇಳಲೇಕೆ ?
ಇಹಪರದವನಲ್ಲಾ ಎಂದು, ತತ್ವಕ್ಕೆ ನಾ ಕರ್ತನೆಂದು
ಮತ್ತೊಬ್ಬರ ಬಾಗಿಲ ಕಾಯಲೇಕೆ ?
ಬಿದ್ದಿತ್ತು ಬೆಲ್ಲ ಅಶುದ್ಧದೊಳಗೆ, ಬುದ್ಧಿ ಇನ್ನಾವುದು,ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ ?
-ಸಗರದ ಬೊಮ್ಮಣ್ಣ

































