ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಒಂದೆಂದರಿದಂಗೆ ಎರಡೆಂಬುದಿಲ್ಲ,
ಎರಡೆಂದರಿದಂಗೆ ಮೂರೆಂಬುದಿಲ್ಲ,
ಮೂರೆಂದರಿದಂಗೆ ಮುಟ್ಟಿದ,
ನಾಲ್ಕೆಂದರಿದಂಗೆ ನಗುತಿರ್ದ,
ಐದೆಂದರಿದಂಗೆಯ್ದಿದ,
ಆರೆಂದರಿದಂಗೆ ಮೀರಿದ,
ಏಳೆಂದರಿದಂಗೆ ಎಚ್ಚರಿಸಿದ,
ಎಂಟೆಂದರಿದಂಗೆ ಕಂಟಕವಿಲ್ಲ,
ಒಂಬತ್ತೆಂದರಿದಂಗೆ ಸಂಭಾವಿತ,
ಹತ್ತೆಂದರಿದಂಗೆ ಒಂದೆಂಬುದಿಲ್ಲ.
ಮಾಟ ಕೂಟ ನೋಟ ಶೃಂಗಾರಬೇಟ
ಷೋಡಶೋಪಚಾರ ಕೂಟಕ್ಕೆಂದು ಮಾಡಿದನಾಚಯ್ಯಪ್ರಿಯ ಚೆನ್ನರಾಮೇಶ್ವರ.
-ಅನಾಮಿಕ ನಾಚಯ್ಯ
































