ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಬಿಸಿಲ ಮುಂದಣ ಮಂಜಿನಂತಾಯಿತ್ತು.
ದಿಟದ ಮುಂದಣ ಸಟೆಯಂತಾಯಿತ್ತು.
ಪುಣ್ಯದ ಮುಂದಣ ಪಾಪದಂತಾಯಿತ್ತು.
ಯೋಗಿಯ ಮುಂದಣ ಸಂಸಾರದಂತಾಯಿತ್ತು.
ಧೀರನ ಮುಂದಣ ಹೇಡಿಯಂತಾಯಿತ್ತು.
ಉರಗನ ಮುಂದಣ ಭೇಕನಂತಾಯಿತ್ತು.
ಹರಿಯ ಮುಂದಣ ಕರಿಯಂತಾಯಿತ್ತು.
ವಿವೇಕದ ಮುಂದಣ ದುಃಖದಂತಾಯಿತ್ತು.
ಪುಣ್ಯಾರಣ್ಯದಹನ ಭೀಮೇಶ್ವರನೆಂಬ
ಸದ್ಗುರು ಕಾರುಣ್ಯವಾಗಲೊಡನೆಎನ್ನ ಸುತ್ತಿಹ ಪ್ರಪಂಚು ಸರ್ವವೂ ಓಡಿದವಯ್ಯಾ!
-ಕೋಲ ಶಾಂತಯ್ಯ






























