ಕೇರಳ: ಕೇರಳದ ಮುಖ್ಯಮಂತ್ರಿ ಆಯ್ಕೆಯ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. V. D. ಸತೀಶನ್ ಅವರನ್ನು CM ಆಗಿ ನೇಮಿಸುತ್ತಿರುವುದಾಗಿ ಕಾಂಗ್ರೆಸ್ ಘೋಷಿಸಿದೆ.
ಅವರೊಂದಿಗೆ K. C. ವೇಣುಗೋಪಾಲ್, ಚೆನ್ನಿತ್ತಲ ಕೂಡ ರೇಸ್ನಲ್ಲಿದ್ದರೂ, ಅಂತಿಮವಾಗಿ ಪಕ್ಷದ ಹೈಕಮಾಂಡ್ ಸತೀಶನ್ ಪರವಾಗಿಯೇ ಒಲವು ತೋರಿದೆ.
ಸರ್ಕಾರ ರಚನೆಗೆ ಆಹ್ವಾನ ನೀಡುವಂತೆ ಕಾಂಗ್ರೆಸ್ ನೇತೃತ್ವದ UDF ಈಗಾಗಲೇ ರಾಜ್ಯಪಾಲರನ್ನು ಕೋರಿದೆ. ಇದರೊಂದಿಗೆ ಸತೀಶನ್ ಶೀಘ್ರದಲ್ಲೇ ಕೇರಳದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

































