ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಶಾಲಾ, ಕಾಲೇಜುಗಳು ಕನಿಷ್ಠ 12 ವರ್ಷದಿಂದ ನಿರಂತರವಾಗಿ ಬಳಕೆ ಮಾಡುತ್ತಿರುವ ಭೂಮಿಯ ದಾಖಲೆಗಳಲ್ಲಿ ಸಂಬಂಧಪಟ್ಟ ಸರ್ಕಾರಿ ಶಾಲೆಯ ಹೆಸರು ದಾಖಲಿಸುವಂತೆ ಕಂದಾಯ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ರಾಜ್ಯದಲ್ಲಿ ಸಾವಿರಾರು ಸರ್ಕಾರಿ, ಶಾಲಾ ಕಾಲೇಜುಗಳಿಗೆ ಭೂ ದಾಖಲೆ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳ ಭೂಮಿಗಳ ಅಧಿನಿಯಮ 2026 ಕಾಯ್ದೆ ಜಾರಿಗೆ ತರಲಾಗಿದೆ. ಇದರ ಅನ್ವಯ ಸರ್ಕಾರಿ ಶಾಲಾ, ಕಾಲೇಜುಗಳು ಕನಿಷ್ಠ 12 ವರ್ಷದಿಂದ ನಿರಂತರವಾಗಿ ಬಳಸುತ್ತಿರುವ ಭೂಮಿಯು ಎಲ್ಲಾ ಹಕ್ಕು ದಾವೆ ಮತ್ತು ಬಾಧ್ಯತೆಗಳಿಂದ ಮುಕ್ತಗೊಂಡು ರಾಜ್ಯ ಸರ್ಕಾರದ ಜಾಗವಾಗಿ ಪರಿಗಣಿಸಲಾಗುತ್ತದೆ.
ಈ ಹಿನ್ನೆಲೆಯಲ್ಲಿ ಎಲ್ಲಾ ಸಂಬಂಧಿಸಿದ ಭೂ ದಾಖಲೆಗಳಲ್ಲಿ ಸಂಬಂಧಿಸಿದ ಜಮೀನನ್ನು ಬಳಸುತ್ತಿರುವ ಸರ್ಕಾರಿ ಶಾಲೆಯ ಹೆಸರನ್ನು ದಾಖಲಿಸುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.






























