ಬೆಂಗಳೂರು: ಅಬಕಾರಿ ಇಲಾಖೆಯ ಬೊಕ್ಕಸ ತುಂಬಿಸುತ್ತಿದ್ದ ಮದ್ಯಪ್ರಿಯರು ಸದ್ಯ ದಾರಿ ಬದಲಿಸಿದ್ದಾರೆಯೇ ? ಹೌದು, ಕಳೆದ ತಿಂಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಮದ್ಯದ ಮಾರಾಟ ಭಾರಿ ಕುಸಿತ ಕಂಡಿದ್ದು, ಸರ್ಕಾರದ ಆದಾಯಕ್ಕೂ ಗಣನೀಯವಾಗಿ ಕತ್ತರಿ ಬಿದ್ದಿದೆ. ಬ್ರಾಂದಿ, ಐಎಂಎಲ್ ಹಾಗೂ ಬೀಯರ್ ಮಾರಾಟದಲ್ಲಿ ಕಂಡುಬಂದಿರುವ ಈ ದಿಢೀರ್ ಇಳಿಕೆಯು ಅಬಕಾರಿ ಇಲಾಖೆಯ ಆತಂಕಕ್ಕೆ ಕಾರಣವಾಗಿದೆ.
ಏಪ್ರಿಲ್ನಲ್ಲಿ 68.17 ಲಕ್ಷ ಬಾಕ್ಸ್ ಇದ್ದ ಐಎಂಎಲ್ ಮದ್ಯದ ಮಾರಾಟ ಮೇನಲ್ಲಿ 51.17 ಲಕ್ಷ ಬಾಕ್ಸ್ಗೆ ಕುಸಿದಿದೆ.ಬೀಯರ್ ಮಾರಾಟವು ಏಪ್ರಿಲ್ನಲ್ಲಿ 50.39 ಲಕ್ಷ ಬಾಕ್ಸ್ ಇದ್ದದ್ದು, ಮೇನಲ್ಲಿ 48.97 ಲಕ್ಷ ಬಾಕ್ಸ್ಗೆ ಇಳಿಕೆಯಾಗಿದೆ. ಅಬಕಾರಿ ಇಲಾಖೆಯ ಆದಾಯವು ಏಪ್ರಿಲ್ನ 3687 ಕೋಟಿ ರೂ.ನಿಂದ ಮೇನಲ್ಲಿ 3232 ಕೋಟಿ ರೂ.ಗೆ ಇಳಿದಿದೆ.






























