ಬೆಂಗಳೂರು: ಪ್ರಧಾನಿ ಮೋದಿ ಈಗ ಭಾರತದ ಅತ್ಯಂತ ದೀರ್ಘಾವಧಿಯ ಚುನಾಯಿತ ಪ್ರಧಾನಿಯಾಗಿದ್ದಾರೆ.
ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು 4,398 ದಿನಗಳ ಕಾಲ ಪ್ರಧಾನಿಯಾಗಿದ್ದ ದಾಖಲೆಯನ್ನು ಅವರು ಹಿಂದಿಕ್ಕಿದ್ದಾರೆ. ಪ್ರಧಾನಿಯಾಗಿ ಮೋದಿ ಅವರ ನಿರಂತರ ಅಧಿಕಾರಾವಧಿಯ 4,399 ನೇ(ಇಂದು) ದಿನವಾಗಿದೆ.
ಮೋದಿ ಅವರು 2019 ಹಾಗೂ 2024 ಎರಡರಲ್ಲೂ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದರು. ಸತತ 3 ಲೋಕಸಭಾ ಚುನಾವಣೆಗಳನ್ನು ಗೆದ್ದಿರುವ ಪ್ರಧಾನಿ ಮೋದಿ ಭಾರತದ ಅತ್ಯಂತ ಪ್ರಭಾವಶಾಲಿ ಜನ ನಾಯಕರಲ್ಲಿ ಒಬ್ಬರು.

































