ದಾವಣಗೆರೆ : ಹರಿಹರ ನಗರಸಭಾ ವ್ಯಾಪ್ತಿಯ ಕವಲೆತ್ತು ಗ್ರಾಮದ ಹತ್ತಿರದ ತುಂಗಭದ್ರ ನದಿಯ ಮೂಲದ ಒಳಹರಿವಿನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುತ್ತದೆ.
ಈ ವರ್ಷದ ಮುಂಗಾರಿನಲ್ಲಿ ಮಳೆಯು ಕಡಿಮೆಯಾಗಿರುವುದರಿಂದ ತುಂಗಭದ್ರ ನದಿಯ ಒಳಹರಿವಿನ ನೀರಿನ ಮೂಲದಲ್ಲಿಯೂ ಕಡಿಮೆಯಾಗಿರುತ್ತದೆ. ಆದಕಾರಣ ನಿರಂತರ ನೀರು ಸರಬರಾಜನ್ನು ದಿನಂ ಪ್ರತಿ ಬೆಳ್ಳಗೆ 6 ರಿಂದ 10 ಗಂಟೆ ಹಾಗೂ ಸಂಜೆ 6 ರಿಂದ 10 ಗಂಟೆಯವರೆಗೆ ನಗರಕ್ಕೆ ನೀರನ್ನು ಸರಬರಾಜು ಮಾಡಲಾಗುತ್ತದೆ. ಹಾಗೂ ಸಾರ್ವಜನಿಕರು ಕಡ್ಡಾಯವಾಗಿ ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು. ನೀರನ್ನು ವ್ಯರ್ಥ ಮಾಡದೇ ಮಿತವಾಗಿ ಬಳಸಿ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕೆಂದು ಹರಿಹರ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.































