ಬೆಂಗಳೂರು; ಕೃಷಿ ಇಲಾಖೆಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ಅಧೀಕ್ಷಕರಾಗಿ ನಿವೃತ್ತರಾಗಿದ್ದ ಹಿರಿಯ ಸಾಹಿತಿ, ಪ್ರಕಾಶಕ ಬಿ.ಜಿ.ಸತ್ಯಮೂರ್ತಿ(88) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಇವರ ಬಹು ಮುಖ್ಯವಾದ ಕೃತಿಯೆಂದರೆ “ಸಾಹಿತಿ ಮಾಹಿತಿ ಕೋಶ” 8 ಸಂಪುಟಗಳಲ್ಲಿ ಸುಮಾರು 1454 ಸಾಹಿತಿಗಳ ಸಂಕ್ಷಿಪ್ತ ವಿವರಗಳನ್ನು ಪ್ರಕಟಿಸಿದ್ದರು. ಇವರಿಗೆ ಅತ್ತಿಮಬ್ಬೆ ಪ್ರತಿಷ್ಠಾನದ ಪ್ರಶಸ್ತಿ. ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ರತ್ನ ಪ್ರಶಸ್ತಿ, ಕೃಷಿ ಇಲಾಖೆಯ ಪ್ರಶಸ್ತಿ ಲಭಿಸಿತ್ತು.

































