ದಾವಣಗೆರೆ: ಜುಲೈ 10 ರಿಂದ 21 ರವರೆಗೆ ಜಗಳೂರಿನ ಆಲ್ ಫಾತೀಮಾ ಅಲ್ಪಸಂಖ್ಯಾತರ ಮಹಿಳಾ ಕಲ್ಯಾಣ ಅಭಿವೃದ್ದಿ ಸಂಸ್ಥೆಯ ಸಭಾಂಗಣ, ನೆಹರುರಸ್ತೆ, ಜಗಳೂರು, ಇಲ್ಲಿ ಜಿಲ್ಲೆಯ ಮಹಿಳಾ ಉದ್ಯವi ಆಕಾಂಕ್ಷಿಗಳಿಗೆ 10 ದಿನಗಳ ಉದ್ಯಮ ಶೀಲತಾಭಿವೃದ್ಧಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಬೆಂಗಳೂರು, ಇವರ ಪ್ರಾಯೋಜಕತ್ವದಲ್ಲಿ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ, ಧಾರವಾಡ(ಸಿಡಾಕ್), ಹಾಗೂ ಆಲ್ ಫಾತೀಮಾ ಅಲ್ಪಸಂಖ್ಯಾತರ ಮಹಿಳಾಕಲ್ಯಾಣ ಅಭಿವೃದ್ದಿಸಂಸ್ಥೆ. ಜಗಳೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಇಚ್ಛಿಸುವ ಅಭ್ಯರ್ಥಿಗಳು ಉದ್ಯಮಶೀಲರ ಗುಣಲಕ್ಷಣಗಳು, ಸಾಮಥ್ರ್ಯಗಳು, ಉದ್ಯಮಶೀಲತೆಯ ಅಭಿವೃದ್ದಿಗೆ ಅªಶ್ಯವಿರುವ ಸಾಧನಾ ಪ್ರೇರಣತರಬೇತಿ, ಉದ್ಯಮ ಸ್ಥಾಪಿಸಲು ಅನುಸರಿಸಬೇಕಾದಹಂತಗಳು, ಉದ್ಯವi ಅವಕಾಶಗಳನ್ನು ಗುರುತಿಸುವುದು, ಉದ್ಯಮ ಆಯ್ಕೆಯ ವಿಧಾನ, ಹಣಕಾಸು ನಿರ್ವಹಣೆ, ಮಾರುಕಟ್ಟೆ ನಿರ್ವಹಣೆ, ಲೆಕ್ಕಪತ್ರ ನಿರ್ವಹಣೆ, ಸಣ್ಣಉದ್ಯಮ ನಿರ್ವಹಣೆಸರ್ಕಾರದ ಸ್ವಯಂಉದ್ಯಮ ಯೋಜನೆಗಳು, ಯೋಜನಾ ವರದಿ ತಯಾರಿಕೆ ಇತ್ಯಾದಿ ವಿಷಯಗಳ ಬಗ್ಗೆ ಪರಿಣಿತ ಅತಿಥಿ ಬೋಧಕರಿಂದ ಉಪನ್ಯಾಸಗಳನ್ನು ಏರ್ಪಡಿಸಲಾಗುವದು. ತರಬೇತಿಯ ಭಾಗವಾಗಿ ಕೈಗಾರಿಕಾ ಭೇಟಿಯನ್ನು ಏರ್ಪಡಿಸಿ ಯಶಸ್ವಿ ಉದ್ಯಮಶೀಲರೊಂದಿಗೆ ಚರ್ಚಿಸುವ ಅವಕಾಶ ನೀಡಲಾಗುವದು. ತರಬೇತಿ ಮುಗಿದ ನಂತರ ಉದ್ಯಮ ಪ್ರಾರಂಭಿಸಲು ಬೆಂಬಲಸೇವೆ ಒದಗಿಸಲಾಗುವದು.
18 ರಿಂದ 50 ವರ್ಷ ವಯೋಮಿತಿಯ, 10ನೇ ತರಗತಿ ಪಾಸಾದ ಮಹಿಳಾ ಉದ್ಯವi ಆಕಾಂಕ್ಷಿಗಳು ಭಾಗವಹಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಮಹಿಳೆಯರು ಉಪ ನಿರ್ದೇಶಕರಕಛೇರಿ, ಸಿಡಾಕ್, ಪ್ಲಾಟ್ ನಂ: 76ಎ-(ಪಿ1), ಕರೂರುಕೈಗಾರಿಕಾ ಪ್ರದೇಶ, ಪಿ.ಬಿ. ರಸ್ತೆ, ದಾವಣಗೆರೆ-577006 ಉಪ ನಿರ್ದೇಶಕರು ಶಿವಾನಂದ ಎಲಿಗಾರ್ ದೂ.ಸಂ: 9448812974, , ಬಸವರಾಜ ಜಿ. ಬಿ. ತರಬೇತಿದಾರರು, ಮೊ.ಸಂ: 9164742033 ವಿನಯ ಜಿ. ಕೆ. ಮೊ.ಸಂ: 9886115200 ಸಂಪರ್ಕಿಸಬಹುದೆಂದು ಸಿಡಾಕ್ ಉಪ ನಿರ್ದೇಶಕರು ತಿಳಿಸಿದ್ದಾರೆ.
(AI ಚಿತ್ರ)

































