ಚಿತ್ರದುರ್ಗ : ನಗರದ ಧರ್ಮಶಾಲಾ ರಸ್ತೆಯ ಹಿರಿಯ ನ್ಯಾಯವಾದಿ ಬಿ.ಎನ್.ಲಕ್ಷ್ಮಿನಾರಾಯಣರಾವ್(71) ಸೋಮವಾರ ಸಂಜೆ ನಿಧನರಾದರು.
ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸಾಗಿಸುವಾಗ ಮಾರ್ಗ ಮಧ್ಯೆ ತುಮಕೂರಿನ ಬಳಿ ಕೊನೆಯುಸಿರೆಳೆದರು.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮಂಗಳವಾರ ಮಧ್ಯಾಹ್ನ ಮೃತರ ಅಂತ್ಯಕ್ರಿಯೆ ಚಿತಾಗಾರದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
































