ಚಿತ್ರದುರ್ಗ : ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದ ಹಿರಿಯ ರಾಜಕಾರಣಿ ಹೆಚ್.ಹನುಮಂತಪ್ಪನವರ ನಿಧನದಿಂದ ಪಕ್ಷದ ಕಾರ್ಯಕರ್ತರು ಹಾಗೂ ಕುಟುಂಬದವರಿಗೆ ಅಪಾರ ನೋವುಂಟಾಗಿದೆ ಎಂದು ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಂಬನಿ ಮಿಡಿದರು.
ಭಾನುವಾರ ನಿಧನರಾದ ರಾಜ್ಯಸಭೆ ಮಾಜಿ ಸದಸ್ಯ ಹೆಚ್.ಹನುಮಂತಪ್ಪನವರ ಪಾರ್ಥಿಕ ಶರೀರಕ್ಕೆ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಸೋಮವಾರ ಪುಷ್ಪಗುಚ್ಚವಿರಿಸಿ ಮಾತನಾಡಿದ ಅವರು 1989 ರಿಂದಲೂ ನಾನು ಅವರನ್ನು ಚೆನ್ನಾಗಿ ಬಲ್ಲೆ. ರೈಲ್ವೆ ಬೋರ್ಡ್ ಚೇರ್ಮನ್ ಆಗಿದ್ದಾಗ ಪಾರದರ್ಶಕವಾಗಿ ಆಡಳಿತ ನಡೆಸಿದರು. ಅನೇಕ ನಾಯಕರುಗಳಿಗೆ ಸಹಾಯ ಮಾಡಿದ್ದಾರೆ. ಕುಟುಂಬದಲ್ಲಿ ಯಾರನ್ನು ರಾಜಕಾರಣಕ್ಕೆ ತರಲು ಆಸೆ ಪಡಲಿಲ್ಲ. ಸರಳ ಜೀವಿ. ಎಲ್ಲಾ ವರ್ಗದವರ ಪ್ರೀತಿ ವಿಶ್ವಾಸ ಗಳಿಸಿದ್ದರು. ಅವರ ದೇಹ ನಮ್ಮನ್ನೆಲ್ಲಾ ಅಗಲಿರಬಹುದು. ಆದರೆ ಅವರ ಭಾವನೆ, ಆಚಾರ, ವಿಚಾರಗಳು ಇನ್ನು ಜೀವಂತವಾಗಿವೆ. ಇಂದಿರಾಗಾಂಧಿ, ರಾಜೀವ್ಗಾಂಧಿ
ಸೋನಿಯಾಗಾಂಧಿಗೆ ವಿವಿಧ ಹಂತಗಳಲ್ಲಿ ಮಾರ್ಗದರ್ಶಕರಾಗಿದ್ದರೆಂದು ಸ್ಮರಿಸಿದರು.
ಎಸ್.ನಿಜಲಿಂಗಪ್ಪನವರ ಅನುಯಾಯಿಯಾಗಿದ್ದ ಹೆಚ್.ಹನುಮಂತಪ್ಪನವರು ಕೃಷಿ ನೀರಾವರಿ ಯೋಜನೆಗಳಿಗಾಗಿ ದೊಡ್ಡ ಹೋರಾಟ ಕಟ್ಟಿದವರು. ಚಿತ್ರದುರ್ಗದಲ್ಲಿ ಕಾಂಗ್ರೆಸ್ ಪಕ್ಷದ ಕಟ್ಟಡ ಕಟ್ಟಬೇಕೆಂದು ಮೊದಲ ಹೆಜ್ಜೆ ಇಟ್ಟವರು. ಚಿತ್ರದುರ್ಗಕ್ಕೆ ಅನೇಕ ಯೋಜನೆಗಳನ್ನು ಜಾರಿಗೆ ತರುವುದಕ್ಕಾಗಿ ಸಂಸತ್ ಹಾಗೂ ಸರ್ಕಾರದಲ್ಲಿ
ಧ್ವನಿ ಎತ್ತಿದ ಹಿರಿಯ ರಾಜಕಾರಣಿಯನ್ನು ನಾವುಗಳು ಕಳೆದುಕೊಂಡಿದ್ದೇವೆ. ಜಾಫರ್ಷರೀಫ್ರವರ ಒಡನಾಡಿಯಾಗಿದ್ದ ಅವರು ಕೈಗೊಂಡ ಕಾರ್ಯಗಳು ಇನ್ನು ನೆನಪಾಗಿ ಉಳಿದಿದೆ. ಅವರ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸಿ ದುಃಖತಪ್ತ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ಉಪ ಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ. ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಮಾಜಿ ಸಚಿವ ಆರ್.ವಿ.ತಿಮ್ಮಾಪುರ, ಶಾಸಕರುಗಳಾದ ಪ್ರಸಾದ್ ಅಬ್ಬಯ್ಯ,
ಟಿ.ರಘುಮೂರ್ತಿ, ಎನ್.ವೈ.ಗೋಪಾಲಕೃಷ್ಣ, ಕೆ.ಸಿ.ವೀರೇಂದ್ರಪಪ್ಪಿ, ಡಾ.ಎಂ.ಚಂದ್ರಪ್ಪ, ಕೆಪಿಸಿಸಿ. ಮಾಜಿ ಅಧ್ಯಕ್ಷ ಅಲ್ಲಂವೀರಭದ್ರಪ್ಪ, ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್, ನೂತನ ಶಾಸಕ ಸಮರ್ಥ್, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ, ಮಾಜಿ ಸಚಿವ ಹೆಚ್.ಆಂಜನೇಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ಪೀರ್, ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಉಪಾಧ್ಯಕ್ಷರುಗಳಾದ ಎಸ್.ಎನ್.ರವಿಕುಮಾರ್, ಡಿ.ಟಿ.ವೆಂಕಟೇಶ್, ನಜ್ಮತಾಜ್, ಕರ್ನಾಟಕ ಆದಿಜಾಂಬವ ಅಭಿವೃದ್ದಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ದ್ರಾಕ್ಷಾ ರಸಮಂಡಳಿ ಅಧ್ಯಕ್ಷ ಬಿ.ಯೋಗೇಶ್ಬಾಬು, ಕಂಠೀರವ ಸ್ಟುಡಿಯೋದ ಅಧ್ಯಕ್ಷ ಮೆಹಬೂಬ್ಪಾಷ, ನಗರಸಭೆ ಮಾಜಿ ಅಧ್ಯಕ್ಷರುಗಳಾದ ಸಿ.ಟಿ.ಕೃಷ್ಣಮೂರ್ತಿ, ಹೆಚ್.ಸಿ.ನಿರಂಜನಮೂರ್ತಿ, ಯುವ ನ್ಯಾಯವಾದಿ ಜಿ.ಎಸ್.ಕುಮಾರ್ಗೌಡ, ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರಸ್ವಾಮಿ, ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ, ಛಲವಾದಿ ಗುರುಪೀಠದ ಬಸವನಾಗಿದೇವಸ್ವಾಮಿ, ಸಿದ್ದಯ್ಯನಕೋಟೆ ಸ್ವಾಮೀಜಿ ಸೇರಿದಂತೆ ಅಪಾರ ಅಭಿಮಾನಿಗಳು ಹಾಗೂ ಬಂಧು-ಬಳಗದವರು ಹೆಚ್.ಹನುಮಂತ್ಪಪ್ಪನವರ ಅಂತಿಮ ದರ್ಶನ ಪಡೆದರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಹಾಜರಿದ್ದು, ಸಕಲ ಸರ್ಕಾರಿ ಗೌರವ ಸಲ್ಲಿಸಿದರು.
































