ಮೈಸೂರು: ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರ ಗ್ರಾಮದಲ್ಲಿ ಹಾವು ಕಡಿದು 14 ವರ್ಷದ ಬಾಲಕ ಮೃತಪಟ್ಟಿದ್ದಾನೆ.
ವೆಂಕಟೇಶ್ ಮೃತಪಟ್ಟ ಬಾಲಕ ಎಂದು ಹೇಳಲಾಗಿದೆ. ಹಸುವಿಗೆ ಹುಲ್ಲು ಹಾಕವಾಗ ಬಾಲಕ ವೆಂಕಟೇಶ್ ಗೆ ಹಾವು ಕಡಿದಿದೆ. ಬಲಗೈ ಬೆರಳಿಗೆ ಹಾವು ಕಚ್ಚಿದ್ದರೂ ಬಾಲಕ ಮನೆಯವರಿಗೆ ತಿಳಿಸಿರಲಿಲ್ಲ. ಅಂಗಡಿಯಿಂದ ಪ್ಲಾಸ್ಟರ್ ತಂದು ಬೆರಳಿಗೆ ಸುತ್ತಿಕೊಂಡಿದ್ದ.
ನಂತರ ಅಸ್ವಸ್ಥಗೊಂಡು ಪ್ರಜ್ಞೆತಪ್ಪಿ ಬಿದ್ದಿದ್ದ ಬಾಲಕ ವೆಂಕಟೇಶ್ ನನ್ನು ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ವೆಂಕಟೇಶ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

































