ಚಿತ್ರದುರ್ಗ: ಪುಸ್ತಕ ಸಂಸ್ಕೃತಿ ಇಂದಿನ ದಿನಮಾನಸದಲ್ಲಿ ಬಹಳ ಅವಶ್ಯಕ ಭಕ್ತಿಯ ಭಾವನೆಗಳಿಗಿಂತ ಜ್ಞಾನದ ಬಲಕ್ಕೆ ಮಹತ್ವ ನೀಡಿದ ವಚನಕಾರರ ಸಂದೇಶ ಅತ್ಯಂತ ಪ್ರಸ್ತುತವಾಗಿದೆ.ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಅಭಿಪ್ರಾಯಪಟ್ಟರು.
ಚಿತ್ರದುರ್ಗ ನಗರದ ಡಾ. ನಟರಾಜ್ ಅವರ ನಿವಾಸದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಚಿತ್ರದುರ್ಗ ಜಿಲ್ಲಾ ಜಾಗೃತಿ ಸಮಿತಿಯಿಂದ ಆಯೋಜಿಸಿದ ಮನೆಗೊಂದು ಗ್ರಂಥಾಲಯ ಅನುಷ್ಟಾನ ಸಮಾರಂಭವನ್ನು ಉದ್ಘಾಟಿಸಿಮಾತನಾಡುತ್ತಿದ್ದರು.
ಪುಸ್ತಕ ಸಂಸ್ಕೃತಿ ನಮ್ಮ ಜ್ಞಾನ ಹಾಗೂ ಬದುಕಿನ ಪ್ರಭೆಯಾಗಿದೆ. ಈ ಸಂಸ್ಕೃತಿ ಸಾರ್ವಕಾಲಿಕವಾದದ್ದು, ಇಂಥ ಸಂಸ್ಕೃತಿ ಸಂಕೇತವಾದ ಪುಸ್ತಕಗಳ ಸಂಗ್ರಹಿಸುವ ಮನಸ್ಥಿತಿ ಬದಲಾಗಿದೆ. ಮನುಷ್ಯನ ಮೌಡ್ಯಾಧಾರಿತ ಉದ್ದಿಮೆಗಳು ಬೆಳೆಯುವ ಮೂಲಕ ಲಾಭದಾಯಕ ಮೂಲಗಳಾಗಿವೆ. ಲೇಖಕರು ಮತ್ತು ಪ್ರಕಾಶಕರ ಬದುಕು ದುಸ್ತರವಾಗುತ್ತಿದೆ. ಇಂಥ ಸುದಿಗ್ಧ ಸಂದರ್ಭಗಳಲ್ಲಿ ಓದುವ ಸಂಸ್ಕೃತಿ ಹೆಚ್ಚಾಗಲಿ ಎಂದರು.
ಈ ದಿಸೆಯಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಕಟಗೊಂಡಿರುವ ಸಾಹಿತ್ಯ-ಸಂಶೋಧನ ಕೃತಿಗಳು, ಜಾನಪದ, ನಾಟಕ, ಹಾಗೂ ಕಥೆ-ಕವನ ಸಂಕಲನಗಳು ಹೆಚ್ಚು ಓದುಗರನ್ನು ತಲುಪುವಂತಾಗಲಿ ಎಂದು ಹೇಳಿದರು.
ವಿಷಯಾವಲೋಕನಕಾರರಾಗಿ ಭಾಗವಹಿಸಿದ್ದ ಇತಿಹಾಸ ಹಾಗೂ ಶಾಸನ ಸಂಶೋಧಕ ಡಾ. ಬಿ.ರಾಜಶೇಖರಪ್ಪನವರುಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ನಟರಾಜ್ ಅವರು ಮನೆಯಲ್ಲಿರುವ ಗ್ರಂಥಾಲಯಗಳು ಜ್ಞಾನ ಸಂಪಾದನೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಕೆಗೆ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲು ತುಂಬಾ ಸಹಕಾರಿಯಾಗಿವೆ. ಗ್ರಂಥಾಲಯಗಳ ಸಂಸ್ಕೃತಿ ನಿರಂತರ ಪ್ರಕ್ರಿಯೆಯಾಗಿದ್ದು, ಮನೆಯಲ್ಲಿರುವ ಭೌತಿಕ ಸರಕುಗಳನ್ನು ಪರಿಚಯಸದೇ ಬೌದ್ಧಿಕ ಸಂಪತ್ತಿನ ಪ್ರತೀಕ ಪುಸ್ತಕಗಳನ್ನು ಪರಿಚಯಿಸುವುದು ಬಹು ಸೂಕ್ತವಾಗಿದೆ. ಇಂಥ ಸಂಸ್ಕೃತಿ ನಮಗೆ ವಿದೇಶಗಳಲ್ಲಿ ಉಪನ್ಯಾಸ, ವಿಚಾರ ಮಂಡಿಸಲು ಅತ್ಯಂತ ಪರಿಣಾಮಕಾರಿಯಾಗಿ, ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುವ ಘನತೆ ತಂದುಕೊಟ್ಟಿದೆ ಎಂದು ಹೇಳಿದರು.
ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತಿ ಸಮಿತಿ ಸಂಚಾಲಕ ನಿರಂಜನ ದೇವರಮನೆ, ಡಾ. ಮಂಗಳಗೌರಿ, ಸಿ.ಬಿ.ಶೈಲಾ ಜಯಕುಮಾರ್, ಡಾ. ಯಶೋಧ, ಡಾ. ಚಾಂದಿನಿ ಖಾಲೀದ್, ಶೋಭಾ ಮಲ್ಲಿಕಾರ್ಜುನ, ಕೊಸಕುಂಟೆ ತಿಪ್ಪೇಸ್ವಾಮಿ, ಡಾ. ಯಶೋಧರ, ಸಿ.ಕೆ.ಗೀತಾ, ನಿರ್ಮಲಾ ಮರಡಿಹಳ್ಳಿ, ಪರಮೇಶ್ವರಪ್ಪ ಕುದುರಿ. ವಕೀಲರಾದ ರವಿನಾರಾಯಣ, ಜೆ.ಸಿ.ದಯಾನಂದ, ಕನ್ನಡ ಪ್ರಾಧ್ಯಾಪಕ ಬಿ.ಟಿ.ಚಂದ್ರಶೇಖರ್, ಶ್ರೀಮತಿ ಶಾಂತ ಅಹೋಬಲಪತಿ, ಕುಮಾರಿ ಪ್ರಮಥ ಮಲ್ಲಿಕಾರ್ಜುನ ಮುಂತಾದವರು ಭಾಗವಹಿಸಿದ್ದರು.






























