ಬಿಸಿ ಸುದ್ದಿ .ಕಾಂಗೆ 11 ವರ್ಷದ ಸಂಭ್ರಮ

WhatsApp
Telegram
Facebook
Twitter
LinkedIn

 

ಓದುಗ ದೊರೆಗಳೇ

ಬಿಸಿ ಸುದ್ದಿ ವೆಬ್‌ಸೆಟ್, ಯೂಟ್ಯೂಬ್ ಆರಂಭಿಸುವ ವೇಳೆ ಅತ್ಯಂತ ಆತಂಕ

ಎದುರಾಗಿತ್ತು. ೩೫ ವರ್ಷಗಳ ಪತ್ರಿಕೋದ್ಯಮದಲ್ಲಿ ಕೈಸುಟ್ಟುಕೊಂಡಿದ್ದೇ

ಹೆಚ್ಚು.

ಚಳವಳಿ, ಜನಸಂಘಟನೆಯನ್ನೇ ನಂಬಿರುವ ನಾನು ಬಡಜನರಿಗೆ ನಿವೇಶನ

ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ಬಳ್ಳಾರಿ ಜೈಲುವಾಸ ಅನುಭವಿಸಿದ್ದೇ.

ಬಳಿಕ ವಿಮೋಚನಾ, ಅಗ್ನಿ, ಈಟಿವಿ, ಈ ನಮ್ಮ ಕನ್ನಡನಾಡು ಸೇರಿ ಅನೇಕ

ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿದ ಬಳಿಕ ಮತ್ತೊಮ್ಮೆ ಸ್ವತಂತ್ರವಾಗಿ

ಮಾಧ್ಯಮ ಮುನ್ನಡಿಸುವ ಯೋಜನೆ, ಯೋಜನೆಯೇ ಬಿಸಿ ಸುದ್ದಿ.ಕಾಂ

ಅದರಲ್ಲೂ ಮಧ್ಯಕರ್ನಾಟಕದಲ್ಲಿಯೇ ಮೊದಲ ವೆಬ್‌ಸೆಟ್, ಯೂಟ್ಯೂಬ್ ಎಂಬ

ವಿಷಯವೇ ಹೆಚ್ಚು ದುಗುಡ ಉಂಟು ಮಾಡಿತ್ತು.

ಆದರೆ, ನನ್ನ ಆತಂಕ ದೂರಗೊಳಿಸಿ ನನ್ನ ಕೈಹಿಡಿದು ನಡೆಸಿದವರು ಓದುಗ

ದೊರೆಗಳಾದ ತಾವುಗಳು. ಈಗ ವೆಬ್‌ಸೆಟ್ ಹಾಗೂ ಯೂಟ್ಯೂಬ್‌ಗೆ ೧೧ರ ಪ್ರಾಯ.

ಅನೇಕ ಚಿಂತಕರು, ಬುದ್ಧಿಜೀವಿಗಳು, ಹೋರಾಟಗಾರರು, ಶಿಕ್ಷಕರ ಸಂದರ್ಶನ

ನಡೆಸಿರುವ ಹೆಮ್ಮೆ ನಿಮ್ಮ ಬಿಸಿ ಸುದ್ದಿ ಹೊಂದಿದೆ.

ಈಗ ಇನ್ನಷ್ಟು ಹೊಸ ರೂಪ, ಹೊಸ ಅಂಕಣಗಳೊAದಿಗೆ ಚಿತ್ರದುರ್ಗ ಜಿಲ್ಲೆಯನ್ನೇ

ಕೇಂದ್ರವನ್ನಾಗಿಸಿಕೊAಡು ಜಿಲ್ಲೆಯ ಜನರ ಸಮಸ್ಯೆಗಳಿಗೆ ಧ್ವನಿಯಾಗಲು

ನಮ್ಮ ತಂಡ ನಿರ್ಧರಿಸಿದೆ. ಓದುಗ ದೊರೆಗಳು ತಮ್ಮ ಪ್ರದೇಶದ

ಸಮಸ್ಯೆಗಳನ್ನು ಗಮನಕ್ಕೆ ತಂದರೇ ಅದನ್ನು ಪ್ರಕಟಿಸುವ ಮೂಲಕ

ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಸೆಳೆಯುವ ಪ್ರಯತ್ನ

ನಡೆಸಲಾಗುವುದು.

ಮುಖ್ಯವಾಗಿ ವಾರಕ್ಕೊಂದು ಅಂಕಣ ನಮ್ಮ ತಂಡದ ಹಿರಿಯರೊಬ್ಬರು ತಮ್ಮ

ಮುಂದೆ ಇಡಲಿದ್ದಾರೆ. ಜೊತೆಗೆ ಯೂಟ್ಯೂಬ್‌ಲ್ಲಿ ಸಂದರ್ಶನದ ಜೊತೆಗೆ

ವೆಬ್‌ಸೆಟ್‌ನಲ್ಲಿ ಸುದ್ದಿ ಪ್ರಕಟಿಸಲಾಗುವುದು.

ಮುಖ್ಯವಾಗಿ ವಿಶೇಷ ಸಾಧನೆ ಮಾಡಿದವರು, ಸ್ವಯಂ ಉದ್ಯೋಗದಲ್ಲಿ ಮಾದರಿ

ಆಗಿರುವ ಉದ್ಯಮಿಗಳು, ಕ್ರೀಡಾಪಟುಗಳು, ಜನಪ್ರತಿನಿಧಿಗಳು, ರಾಜಕಾರಣಿಗಳು,

ಹೋರಾಟಗಾರರು ಹೀಗೆ ವಿವಿಧ ಕ್ಷೇತ್ರದ ವಿಶೇಷ ವ್ಯಕ್ತಿಗಳನ್ನು ಪರಿಚಯಿಸಿ

ಕೊಡುವ ಕೆಲಸ ಮಾಡಲಾಗುವುದು. ತಮ್ಮ ಗಮನದಲ್ಲಿರುವ ಅಂತಹ

ಸಾಧಕರ ಕುರಿತು ನಮಗೆ ಮಾಹಿತಿ ನೀಡಿದರೆ ಅವರನ್ನು ಸಮಾಜಕ್ಕೆಕ

ಪರಿಚಯಿಸಲಾಗುವುದು.

ಒಟ್ಟಾರೆ ಬಿಸಿ ಸುದ್ದಿ ನಿಮ್ಮದೇ ವೆಬ್‌ಸೆಟ್ ಆಗಿದ್ದು, ಅದನ್ನು ಇನ್ನಷ್ಟು ಜನರಿಗೆ

ತಲುಪಿಸುವ ಕೆಲಸ ನೀವುಗಳೇ ಮಾಡಬೇಕು. ನಾವು ನಿಮ್ಮ ಮುಖವಾಣಿ ಅಷ್ಟೇ.

ಮುಖ್ಯವಾಗಿ ಇನ್ಮುಂದೆ ಚಿತ್ರದುರ್ಗ ಜಿಲ್ಲೆಯನ್ನೇ ಕೇಂದ್ರವನ್ನಾಗಿಸಿಕೊಂಡು

ಸುದ್ದಿ, ವರದಿ, ವಿಶೇಷ ಲೇಖನ, ಸಂದರ್ಶನ ಪ್ರಕಟಿಸುವ ಪ್ರಾಮಾಣಿಕ

ಪ್ರಯತ್ನ ಮಾಡಲಾಗುವುದು.

 

ಚಳ್ಳಕೆರೆ ಬಸವರಾಜ್

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon