ಬೆಂಗಳೂರು: ಸಿಲಿಂಡರ್ ಪೂರೈಕೆ ವ್ಯತ್ಯಯದ ಹಿನ್ನೆಲೆ ಕನಿಷ್ಠ 1 ತಿಂಗಳ ಕಾಲ ಯಾರಿಗೂ ‘ಹೊಸ ಗ್ಯಾಸ್ ಕನೆಕ್ಷನ್’ ಸಿಗುವುದಿಲ್ಲ ಎಂದು ಭಾರತ್ ಗ್ಯಾಸ್ ಹಾಗೂ HP ಗ್ಯಾಸ್ ಕಂಪನಿಗಳು ತಿಳಿಸಿವೆ.
ಇನ್ನು, ನಗರ ಪ್ರದೇಶದ ಗ್ರಾಹಕರು 1 ಸಿಲಿಂಡರ್ ಬುಕ್ ಮಾಡಿದ ಮೇಲೆ, ಮುಂದಿನ ಸಿಲಿಂಡರ್ ಬುಕ್ ಮಾಡಲು ಕನಿಷ್ಠ 25 ದಿನ ಕಾಯಲೇಬೇಕು. ಗ್ರಾಮೀಣರಿಗೆ ಇದು 45 ದಿನಗಳಾಗಿರುತ್ತದೆ..
ಅಲ್ಲದೆ, OTPಯನ್ನು ಸಿಬ್ಬಂದಿಗೆ ನೀಡಿದರೆ ಮಾತ್ರ ಗ್ಯಾಸ್ ನಿಮ್ಮ ಕೈಸೇರುತ್ತದೆ.. ಈ ನಿಯಮಗಳು ಮೇ 1ರಿಂದಲೇ ಬದಲಾವಣೆಗಳಾಗುತ್ತಿವೆ.
































