ಬೆಂಗಳೂರು; ತಿಪಟೂರು ಕ್ಷೇತ್ರದ ಕಾಂಗ್ರೆಸ್ ಶಾಸಕ K ಷಡಕ್ಷರಿ ಆರೋಗ್ಯದಲ್ಲಿ ದಿಢೀರ್ ಏರುಪೇರು ಕಾಣಿಸಿಕೊಂಡಿದ್ದು, ದೆಹಲಿಯ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಭೇಟಿಗೆ ಷಡಕ್ಷರಿ ದೆಹಲಿಗೆ ತೆರಳಿದ್ದರು. ದೆಹಲಿಯ ಕರ್ನಾಟಕ ಭವನದಲ್ಲಿ ಉಳಿದುಕೊಂಡಿದ್ದ ಷಡಕ್ಷರಿ ಆರೋಗ್ಯದಲ್ಲಿ ಇಂದು ಬೆಳಗ್ಗೆ ದಿಢೀರ್ ಏರುಪೇರು ಕಾಣಿಸಿಕೊಂಡಿದೆ, ಶಾಸಕರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ, ಆಸ್ಪತ್ರೆಯಲ್ಲಿ DCM ಪರಮೇಶ್ವರ್, MLC ರಾಜೇಂದ್ರ ರಾಜಣ್ಣ ಇದ್ದಾರೆ.






























