ಬೆಂಗಳೂರು: ರಾಜ್ಯದಲ್ಲಿ ಯುವಜನತೆ ಮದ್ಯ-ತಂಬಾಕು ಚಟಕ್ಕೆ ದಾಸರಾಗುತ್ತಿರುವ ಆತಂಕಕಾರಿ ವರದಿಯ ಹಿನ್ನೆಲೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.
ಅದರಂತೆ ಇನ್ನುಮುಂದೆ ಪಬ್, ಬಾರ್ ಮತ್ತು ರೆಸ್ಟೋರೆಂಟ್, ಬ್ರೂವರೀಸ್ ಹಾಗೂ ಕ್ಲಬ್‌ಗಳಲ್ಲಿ ವಯಸ್ಸಿನ ದೃಢೀಕರಣಕ್ಕೆ ID ಕಾರ್ಡ್ ಪರಿಶೀಲನೆ ಕಡ್ಡಾಯಗೊಳಿಸಲಾಗಿದೆ.
ನಿಯಮ ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಯುವ ಪೀಳಿಗೆಯ ಆರೋಗ್ಯ, ಸುರಕ್ಷತೆಗೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
































