ಡಿಸಿಎಂ ಜಿ.ಪರಮೇಶ್ವರ್ ಅವರ ಮನದಾಳದ ಮಾತು ಕೇಳಿದ್ರೆ…….!

WhatsApp
Telegram
Facebook
Twitter
LinkedIn

 

ತುಮಕೂರು : 2013ರ ವಿಧಾನಸಭಾ ಚುನಾವಣೆಯಲ್ಲಿ ಸೋತೆ. ಬಹುಶಃ ಅಂದು ಗೆದ್ದಿದ್ದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಿರಲಿಲ್ಲ. ಆದರೆ ನಮ್ಮ ಅದೃಷ್ಟನೋ, ಹಣೆಬರಹವೋ ಗೊತ್ತಿಲ್ಲ. ನಾನು ಸೋತ ಕಾರಣಕ್ಕೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದರು ಎಂದು ಡಿಸಿಎಂ ಜಿ.ಪರಮೇಶ್ವರ್ ತಿಳಿಸಿದರು.

ಉಪಮುಖ್ಯಮಂತ್ರಿಯಾದ ಹಿನ್ನೆಲೆಯಲ್ಲಿ ಇಂದು ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

2018ರಲ್ಲಿ ಪಕ್ಷ 80 ಸೀಟು ಗೆದ್ದಿತ್ತು. 30 ಸೀಟುಗಳನ್ನು ಗೆದ್ದಿದ್ದ ಜೆಡಿಎಸ್​ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ಮಾಡಿದಾಗ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಅಂದೂ ಕೂಡ ನನ್ನನ್ನು ಮುಖ್ಯಮಂತ್ರಿ ಮಾಡಬಹುದಿತ್ತು, ಅದ್ರೆ ಎರಡನೇ ಸಲವೂ ಸಫಲ ಆಗಲ್ಲ. ಈ ಬಾರಿ ಅವಕಾಶ ಸಿಗಲಿದೆ ಎಂದು ತಿಳಿದಿದ್ದೆ. ಆದ್ರೆ ರಾಜಕೀಯ ಗೊತ್ತಲ್ಲ, ತೀರ್ಮಾನಗಳು ಹೇಗೇಗೋ ಆಗುತ್ತವೆ. ಹೀಗಾಗಿ ಉಪಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದಾರೆ. ರಾಜ್ಯದ ಜನ ನಮ್ಮನ್ನು ಗುರುತಿಸಿದ್ದಾರೆ ಎಂದು ಹೇಳಿದರು.

ರಾಜಕೀಯಕ್ಕೆ ಹೋಗಬೇಕೆಂಬ ಕಲ್ಪನೆಯೂ ಕೂಡ ಇರಲಿಲ್ಲ. ಕಾಲೇಜು ದಿನಗಳಲ್ಲಿ ಯೂತ್​ ಕಾಂಗ್ರೆಸ್​, ಎನ್​ಎಸ್​ಯುಐನಲ್ಲಿ ಓಡಾಡುತ್ತಿರಲಿಲ್ಲ. ವ್ಯಾಸಂಗ ಮಾಡುತ್ತಿದ್ದೆ. ರಾಜಕೀಯ ಪ್ರವೇಶ ಆಕಸ್ಮಿಕವಾಗಿ ಆಯಿತು. ರಾಜೀವ್‌ ಗಾಂಧಿ ಪ್ರಧಾನಿಯಾಗಿದ್ದಾಗ ನಮ್ಮ ಕ್ಯಾಂಪಸ್​ಗೆ ಭೇಟಿ ನೀಡಿದ್ದರು. ಅವರು ಕರೆ ಕೊಟ್ಟಿದ್ದರಿಂದ ಕಾಂಗ್ರೆಸ್​ ಪಕ್ಷ ಸೇರಿಕೊಂಡೆ ಎಂದರು.

 

ರಾಜಕೀಯಕ್ಕೆ ಬಂದು 40 ವರ್ಷ ಆಗುತ್ತಿದೆ. ಇಷ್ಟು ವರ್ಷಗಳಲ್ಲಿ ಸ್ವಲ್ಪ ಕೆಲಸ ಮಾಡಿದ್ದೇನೆ, ಇಲ್ಲದಿದ್ದರೆ ಯಾರೂ ಗುರುತಿಸುವುದಿಲ್ಲ. ಪಕ್ಷ ಎಲ್ಲಾ ಹುದ್ದೆಯನ್ನೂ ಕೊಟ್ಟಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಹಿಡಿದು ಪಕ್ಷದಲ್ಲಿ ವರ್ಕಿಂಗ್​ ಕಮಿಟಿಯಲ್ಲಿಯೂ ಸ್ಥಾನ ಕೊಟ್ಟಿದ್ದಾರೆ. ದೆಹಲಿಯಲ್ಲಿ ಎಐಸಿಸಿ ವರ್ಕಿಂಗ್​ ಕಮಿಟಿಯಲ್ಲಿಯೂ ಸದಸ್ಯನನ್ನಾಗಿ ಮಾಡಿದ್ದರು. ಅದಾದ ನಂತರ 2018ರಲ್ಲಿ ಉಪಮುಖ್ಯಮಂತ್ರಿ ಮಾಡಿದರು ಎಂದು ಹೇಳಿದರು.

 

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon