ದಾವಣಗೆರೆ: ದ್ವಿದಳ ಧಾನ್ಯಗಳಲ್ಲಿ ಮೌಲ್ಯವರ್ಧನೆ ಉತ್ತೇಜಿಸಲು ಹಾಗೂ ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ, ದ್ವಿದಳ ಧಾನ್ಯಗಳಲ್ಲಿ ಆತ್ಮನಿರ್ಭರತಾ ಅಭಿಯಾನದಡಿ ಕೊಯ್ಲೋತ್ತರ ಮೂಲಭೂತ ಸೌಕರ್ಯಭಿವೃದ್ದಿಗಾಗಿ ಸಂಸ್ಕರಣೆ ಮತ್ತು ಪ್ಯಾಕೇಂಜಿAಗ್ ಘಟಕಗಳನ್ನು ಸ್ಥಾಪಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ರೈತ ಉತ್ಪಾದಕ ಸಂಸ್ಥೆಗಳು ಕ್ಲಸ್ಟರ್ ಮಟ್ಟದ ಒಕ್ಕೂಟಗಳು, ಪ್ರಾಥಮಿಕ ಕೃಷಿ ಪತ್ತಿನ ಸಂಘಗಳು, ಯಾವುದೇ ನೋಂದಾಯಿತ ಸಂಸ್ಥೆಗಳು ಮತ್ತು ವೈಯಕ್ತಿಕ ಅರ್ಜಿದಾರರಿಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು. ಮತ್ತು ಪ್ರತಿ ಕುಟುಂಬದಿAದ ಒಬ್ಬರಿಗೆ ಮಾತ್ರ ಅವಕಾಶವಿರುತ್ತದೆ. ಗುಂಪು ಅಥವಾ ಸಂಸ್ಥೆಗಳು ಕಡ್ಡಾಯವಾಗಿ ನೋಂದಣಿಯಾಗಿದ್ದು ಕನಿಷ್ಠ, 2 ವರ್ಷ ಕಾರ್ಯನಿರ್ವಹಿಸಿರಬೇಕು ಯೋಜನಾ ವೆಚ್ಚದ ಶೇ. 15 ರಷ್ಟು ಸ್ವಂತ ಬಂಡವಾಳ ಹೂಡಿಕೆ ಮಾಡುವ ಸಾಮರ್ಥ್ಯ ಹೊಂದಿರಬೇಕು. ಇಲಾಖೆಯಿಂದ ಯೋಜನಾ ವೆಚ್ಚದ ಶೇ. 33 ರಮ್ಮ ಸಹಾಯಧನವನ್ನು ಕೇಂದ್ರ & ರಾಜ್ಯದ ಪಾಲಿನ ಸಹಾಯಧನದ 69.40 ಅನುಪಾತದಲ್ಲಿ (ಗರಿಷ್ಠ, ರೂ. 25 ಲಕ್ಷಗಳ ಮಿತಿಗೊಳಪಟ್ಟು ನೀಡಲಾಗುವುದು. ಯೋಜನೆಗೆ ಬ್ಯಾಂಕ್ ಸಾಲ ಪಡೆಯುವುದು ಕಡ್ಡಾಯವಾಗಿರುತ್ತದೆ ಮತ್ತು ಸ್ಥಾಪಿಸಲಾಗುವ ದ್ವಿದಳ ಧಾನ್ಯ ಸಂಸ್ಮರಣಾ ಘಟಕಗಳು ಪ್ರತಿ ಗಂಟೆಗೆ ಕನಿಷ್ಠ 300 ಕೆಜಿ ಸಂಸ್ಕರಣಾ ಸಾಮರ್ಥ್ಯ ಹೊಂದಿರಬೇಕು ಮತ್ತು ಯಂತ್ರೋಪಕರಣಗಳು ಬ್ಯೂರಸ್ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಅಥವಾ ಸಮಾನ ಗುಣಮಟ್ಟದ ಮಾನದಂಡಗಳಿಗೆ ಹಾಗೂ ಆಹಾರ ಭದ್ರತೆ, ಪರಿಸರ ಮತ್ತು ಇತರೆ ನಿಯಂತ್ರಣ ಮಾನದಂಡಗಳಿಗೆ ಅನುಗುಣವಾಗಿರಬೇಕು.
ಈ ಯೋಜನೆಯಡಿ ಸೌಲಭ್ಯ ಪಡೆಯಲು ಇಚ್ಚಿಸುವ ವೈಯಕ್ತಿಕ ಫಲಾನುಭವಿಗಳು, ಜುಲೈ 17 ರೊಳಗಾಗಿ ಅರ್ಜಿ ಸಲ್ಲಿಸಬಹುದೆಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

































