ಚಿತ್ರದುರ್ಗ: 2026-27ನೇ ಸಾಲಿಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಖಾಲಿ ಇರುವ ಪ್ರಾಥಮಿಕ ಬಿಐಇಆರ್ಟಿ ಹಾಗೂ ಪ್ರೌಢ ಬಿಐಇಆರ್ಟಿ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ನೇರಗುತ್ತಿಗೆ ಮೂಲಕ ತಾತ್ಕಾಲಿಕ ಸೇವೆ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಜೂನ್ 18 ಅರ್ಜಿ ಸಲ್ಲಿಸಲು ಕೊನೆಯ ದಿನ
ಪ್ರಾಥಮಿಕ ಬಿಐಇಆರ್ಟಿ ಹುದ್ದೆಗೆ ಡಿ.ಇಡಿ ಇನ್ ಸ್ಪೆಷಲ್ ಎಜುಕೇಷನ್ ಜೊತೆಗೆ Valid RCI CRR number ಮತ್ತು ಪ್ರೌಢ ಬಿಐಇಆರ್ಟಿ ಹುದ್ದೆಗೆ ಬಿ.ಇಡಿ ಇನ್ ಸ್ಪೆಷಲ್ ಎಜುಕೇಷನ್ ಜೊತೆಗೆ Valid RCI CRR number ಹೊಂದಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು ಜೂನ್ 18ರ ಸಂಜೆ 5 ಗಂಟೆಯೊಳಗೆ ಭರ್ತಿ ಮಾಡಿದ ದೃಢೀಕೃತ ದಾಖಲೆಗಳೊಂದಿಗೆ ಅರ್ಜಿಯನ್ನು ಮುದ್ದಾಂ ಉಪನಿರ್ದೇಶಕರು (ಆಡಳಿತ) ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾಧಿಕಾರಿ, ಸಮಗ್ರ ಶಿಕ್ಷಣ ಕರ್ನಾಟಕ, ಶಾಲಾ ಶಿಕ್ಷಣ ಇಲಾಖೆ, ಚಿತ್ರದುರ್ಗ ಈ ಕಚೇರಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ ತಿಳಿಸಿದ್ದಾರೆ.
































