ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಹರಹರಯೆಂದು ನೆನೆದಡೆ ಜನನ ಮರಣ ಹಿಂಗುವದೆ ?
ಹಾಂಗೆ ಲೋಕದ ಮಾತ ಕೇಳಲಾಗದು.
ಅದು ಹೇಂಗೆಯೆಂದಡೆ :
ಜ್ಯೋತಿಯ ನೆನೆದಡೆ ತಿಮಿರ ಹೋಹುದೇನಯ್ಯಾ ?
ಪಂಚಾಮೃತವ ನೆನೆದಡೆ ಹಸಿವು ತೃಷೆ ಅಡಗುವುದೇನಯ್ಯಾ ?
ಆಗಮಶಾಸ್ತ್ರವ ನೋಡಿದಡೆ, ಕಿವಿಗೊಟ್ಟು ಕೇಳಿ ಹಾಡಿ ಪಾಡಿದಡೆ,
ಅಯ್ಯಾ ನಿಮ್ಮ ಕಂಡಂತಾಯಿತ್ತಯ್ಯಾ ಎಂದುದಾಗಿ,
ಆದಡಾಗಲಿ ಕಂಡು ಆಡುವುದಲ್ಲದೆ,
ಕಾಣದೆ ಆಡುವುದೆಲ್ಲ ಸಂತೆಯಾಗಿ ಹೋಯಿತ್ತಯ್ಯ ಕಾಣಾ,ಜಂಗಮಲಿಂಗಪ್ರಭುವೆ.
–ಜಂಗಮಲಿಂಗಪ್ರಭುವೆ

































