ದೆಹಲಿ: ಕುಸ್ತಿ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತ ಇತಿಹಾಸ ಸೃಷ್ಟಿಸಿದೆ. ಮನೀಷಾ ಬನ್ವಾಲಾ ಅವರು ತಮ್ಮ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕಜಕಸ್ತಾನದ ಅಸ್ತಾನದಲ್ಲಿ ನಡೆದ 59 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ, ಅವರು ಅಮೆರಿಕದ ಅಬಿಗೈಲ್ ನೆಟ್ಟೆ ಅವರನ್ನು 8-6 ಅಂತರದಿಂದ ಸೋಲಿಸಿದರು. ಹರಿಯಾಣದ ರೋಕ್ಟಕ್ ಮೂಲದ ಮನೀಷಾ, ವಿಶ್ವ ಚಾಂಪಿಯನ್ಶಿಪ್ನ ಫೈನಲ್ ತಲುಪಿದ ನಾಲ್ಕನೇ ಭಾರತೀಯ ಮಹಿಳಾ ಕುಸ್ತಿಪಟು ಆಗಿದ್ದಾರೆ.