ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
: ಅಂಗದಮೇಲಣ ಲಿಂಗವು ಲಿಂಗವಲ್ಲ;
ಮನದಮೇಲಣ ಲಿಂಗವು ಲಿಂಗವಲ್ಲ;
ಭಾವದಮೇಲಣ ಲಿಂಗವು ಲಿಂಗವಲ್ಲ.
ಅಂಗದಮೇಲಣ ಲಿಂಗ ವ್ಯವಹಾರ;
ಮನದಮೇಲಣ ಲಿಂಗ ಸಂಕಲ್ಪ;
ಭಾವದಮೇಲಣ ಲಿಂಗ ಭ್ರಾಂತುತತ್ವ.
ಆಳಿನ ಆಳು ಅರಸನಪ್ಪನೆ, ಆಳನಾಳುವನರಸಲ್ಲದೆ ?
ಅಂಗ ಪ್ರಾಣ ಭಾವಂಗಳನೊಳಕೊಂಡಿರ್ಪುದೆ ಲಿಂಗಕಾಣಾ, ಮಸಣಯ್ಯಪ್ರಿಯ ಗಜೇಶ್ವರಾ.
-ಗಜೇಶಮಸಣಯ್ಯದ ಪುಣ್ಯಸ್ತ್ರೀ































