ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಸುಖದುಃಖಾದಿಗಳ ಮೀರುವ ಎನ್ನವರ ಕಾಣೆ.
ಸುಖದುಃಖಾದಿಗಳ ಮೀರುವ ನಿನ್ನವರ ಕಾಣೆ.
ಇನ್ನೇನು ಹೇಳುವೆ ? ನಡುಹೊಳೆಯಲ್ಲಿ ಹರುಗೋಲ ಹರಿದಂತೆ,
ಅಂಬಿಗನ ಕೊರಳ ಸುತ್ತಿ ಬಂದವರೆಲ್ಲರೂ
ಉಭಯವು ಹೊಂದಿದಂತಾಯಿತ್ತು.
ನೀ ಎನ್ನ ಬಟ್ಟೆ, ನಾ ನಿನ್ನ ಬಟ್ಟೆ.
ಉಭಯವು ಬಂದ ಬಟ್ಟೆಯಾದೆವಲ್ಲ.ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ.
-ಶಿವಲೆಂಕ ಮಂಚಣ್ಣ































