ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಕತ್ತಲೆ ಮನೆಯೊಳಗೆ ಬೆಳಗುಂಟೇನಯ್ಯ ?
ಆ ಕತ್ತಲೆ ಮನೆಯೊಳಗೆ ಜ್ಯೋತಿಯ ಮುಟ್ಟಿಸಲು
ಕತ್ತಲೆ ಹರಿದುಹೋಯಿತ್ತು ನೋಡಾ.
ಈ ಪರಿಯಾದಲ್ಲಿ ಮನವೆಂಬ ಕತ್ತಲೆಯಲ್ಲಿ
ಜ್ಞಾನವೆಂಬ ಜ್ಯೋತಿಯ ಮುಟ್ಟಿಸಲು
ಒಳಹೊರಗೆ ಪರಿಪೂರ್ಣವಾಗಿ ಬೆಳಗಾಯಿತ್ತು ನೋಡಾಝೇಂಕಾರ ನಿಜಲಿಂಗಪ್ರಭುವೆ.
-ಜಕ್ಕಣಯ್ಯ
































