ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ದೃಷ್ಟಿಯ ದೃಷ್ಟದಿಂದ ಮೋಹದ ಲವಲವಿಕೆ.
ಮೋಹದ ಲವಲವಿಕೆಯಿಂದ ಸ್ವರ್ಶನದ ಉಭಯದ ಕೂಟ ಏಕವಾದಲ್ಲಿ
ಹಿಂದಣ ಕುರುಹು ಮುಂದಣ ಲಕ್ಷ ್ಯ ಅಲಕ್ಷ ್ಯನಾಗಿ
ದಂಪತಿ ದ್ವಂದ್ವವಿಲ್ಲದೆ, ನಿಜವೆಂಬ ಕುರುಹು ಅರಿಕೆದೋರದೆ
ಅವಿರಳ ನಾಮಶೂನ್ಯವಾದದು
ಗೋಪತಿನಾಥ ವಿಶ್ವೇಶ್ವರಲಿಂಗವು ಹೃತ್ಕಮಲದಲ್ಲಿವಿಶ್ರಾಂತಿಯಾದ ಇರವು.
-ತುರುಗಾಹಿ ರಾಮಣ್ಣ






























