ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಆದಿಯನರಿದರು ಮಧ್ಯವನರಿಯರು ಮಧ್ಯವನರಿದರು ಅವಸಾನವನರಿಯರು.
ಅವಸಾನವನರಿದರು ಆದಿಯನರಿಯರು.
ಇಂತಿವರೊಳಗೊಂದನರಿದರು ಒಂದನರಿಯದರೊಂದಜ್ಞಾನಿಗಳಾಗಿ
ಸಂದೇಹಕ್ಕೊಳಗಾದ ಮಂದಮತಿಗಳ ನಾನೆಂತು ನಿಮ್ಮ ಶರಣರಿಗೆಣೆಯೆಂಬೆ,ಪರಮಗುರುವೆ ನಂಜುಂಡಶಿವಾ ?
-ನಂಜುಂಡಶಿವ





























